ಅಲ್ಜೀರಿಯಾದ ವಿಮಾನ ಅಪಘಾತ: 116 ಪ್ರಯಾಣಿಕರ ಸಾವಿನ ಶಂಕೆ

ಗುರುವಾರ, 24 ಜುಲೈ 2014 (19:36 IST)
ಏರ್ ಅಲ್ಜೀರಿ ವಿಮಾನವು ನೈಜರ್ ನದಿಯಲ್ಲಿ ಗುರುವಾರ ಅಪಘಾತಕ್ಕೀಡಾದ ದುರಂತ ಸಂಭವಿಸಿದೆ. ವಿಮಾನದಲ್ಲಿ ಸುಮಾರು 116 ಪ್ರಯಾಣಿಕರಿದ್ದು, ಬಹುಶಃ ಅವರೆಲ್ಲರೂ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

ನಿನ್ನೆ ತಾನೇ ತೈವಾನ್‌ನಲ್ಲಿ ಟ್ರಾನ್ಸ್ ಏಷ್ಯಾ ವಿಮಾನ ಪತನಗೊಂಡು ಸುಮಾರು 51 ಜನರು ಮೃತರಾಗಿದ್ದು, ಈ ವಿಮಾನ ಅಪಘಾತದ ಸುದ್ದಿಯಿಂದ ಚೇತರಿಸಿಕೊಳ್ಳುವಷ್ಟರಲ್ಲೇ ಮತ್ತೊಂದು ವಿಮಾನ ಅಪಘಾತ ಸಂಭವಿಸಿದೆ.  ನಾಪತ್ತೆಯಾದ ವಿಮಾನವು ಮೆಕ್‌ಡೊನೆಲ್ ಡೌಗ್ಲಾಸ್ ಡಿಸಿ-9 ವಿಮಾನವಾಗಿದ್ದು, ವಿವಿಧ ರಾಷ್ಟ್ರದ ಜನರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.

ಅನೇಕ ಫ್ರೆಂಚ್ ಪೌರರು ಕೂಡ ವಿಮಾನದಲ್ಲಿದ್ದರು ಎಂದು ಸಾರಿಗೆ ಸಚಿವ ದೃಢಪಡಿಸಿದ್ದಾರೆ. ಅಲ್ಜೀರಿಯ ಗಡಿ ಸಮೀಪದ ಮಾಲಿ ವಾಯುಪ್ರದೇಶದಲ್ಲಿ ವಿಮಾನ ರೇಡಿಯೋ ಸಂಪರ್ಕ ಕಳೆದುಕೊಂಡಿತು. ಮಾಲಿಯಲ್ಲಿ ಈಗಲೂ ಅಸ್ಥಿರ ಪರಿಸ್ಥಿತಿಯಿದ್ದು, 2012ರಲ್ಲಿ ಜಿಹಾದಿ ಗುಂಪುಗಳು ಅನೇಕ ತಿಂಗಳವರೆಗೆ ವಶಕ್ಕೆ ತೆಗೆದುಕೊಂಡಿದ್ದವು. 

ವೆಬ್ದುನಿಯಾವನ್ನು ಓದಿ