ಇದೀಗ ಅಲ್‌ಖೈದಾ ನಿಯಂತ್ರಣ ಜವಾಹಿರಿಗೆ ಕಷ್ಟವಂತೆ

ಮಂಗಳವಾರ, 30 ಆಗಸ್ಟ್ 2011 (16:40 IST)
ಅಲ್‌ಖೈದಾದ ಎರಡನೇ ಮುಖಂಡ ಅತಿಯಾ ಅಬ್ದ್‌ ಅಲ್‌ ರಹಮಾನ್‌ ಹತ್ಯೆಯಾದ ಬಳಿಕ ಅಲ್‌ ಖೈದಾ ಮುಖಂಡ ಐಮನ್‌ ಅಲ್‌ ಜವಾಹಿರಿಗೆ ಉಗ್ರಗಾಮಿ ಸಂಘಟನೆಯನ್ನು ಸಂಘಟಿಸಿ ನಿಯಂತ್ರಣ ಸಾಧಿಸಲು ಅಸಾಧ್ಯವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಅಲ್‌ ಖೈದಾ ಮುಖಂಡ ಒಸಾಮಾ ಬಿನ್‌ ಲಾಡೆನ್‌ನನ್ನು ಅಮೆರಿಕ ಕಮಾಂಡೋ ಪಡೆ ಮೇ 2ರಂದು ಪಾಕಿಸ್ತಾನದ ಅಬೋತಾಬಾದ್‌ನಲ್ಲಿ ಹತ್ಯೆಗೈದ ನಂತರ ಐಮನ್‌ ಅಲ್‌ ಜವಾಹಿರಿ ಅಲ್‌ಖೈದಾ ಉಗ್ರಗಾಮಿ ಸಂಘಟನೆಯ ನೇತೃತ್ವ ವಹಿಸಿದ್ದ.

ಪಾಕಿಸ್ತಾನದ ವಜೀರಿಸ್ತಾನದಲ್ಲಿ ಆಗಸ್ಟ್‌ 22ರಂದು ಅಮೆರಿಕದ ಚಾಲಕ ರಹಿತ ಯುದ್ಧ ವಿಮಾನ ನಡೆಸಿದ ಡ್ರೋನ್‌ ದಾಳಿಯಲ್ಲಿ ಅಲ್‌ಖೈದಾ ಸಂಘಟನೆಯ ಎರಡನೇ ನಾಯಕ ಅತಿಯಾ ಅಬ್ದುಲ್‌ ರಹಮಾನ್‌ ಸಾವನ್ನಪ್ಪಿದ್ದ.

ಅಲ್‌ ಖೈದಾ ಸಂಘಟನೆಯನ್ನು ನಿಯಂತ್ರಿಸಲು ಐಮನ್‌ ಅಲ್‌ ಜವಾಹಿರಿಯು ಅತಿಯಾ ಅಬ್ದ್‌ ಅಲ್‌ ರಹಮಾನ್‌ನ ನೆರವು ಬಯಸಿದ್ದ, ಈಗ ರಹಮಾನ್‌ ಸಾವಿನಿಂದಾಗಿ ಜವಾಹಿರಿಗೆ ಸಂಘಟನೆಯನ್ನು ನಿಯಂತ್ರಿಸಲು ಕಷ್ಟವಾಗುತ್ತಿದೆ ಎಂದು ಅಮೆರಿಕ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅಲ್‌ಖೈದಾ ಉಗ್ರಗಾಮಿ ಸಂಘಟನೆಯ ನಂಬಿಕೆಯ ಮುಖಂಡನಾಗಿದ್ದ ಅತಿಯಾ ಅಬ್ದ್‌ ಅಲ್‌ ರೆಹಮಾನ್‌ ಹತ್ಯೆಯಿಂದಾಗಿ ಅಲ್‌ಖೈದಾ ಉಗ್ರಗಾಮಿ ಸಂಘಟನೆಗೆ ದೊಡ್ಡ ಆಘಾತವಾಗಿದೆ. ಶೇಖ್‌ ಸೈದ್‌ ಅಲ್‌ ಮಾಸ್ರಿ ಕಳೆದ ವರ್ಷ ಹತ್ಯೆಯಾದ ನಂತರ ಅತಿಯಾ ಅಬ್ದ್‌ ಅಲ್‌ ರೆಹಮಾನ್‌, ಪ್ರತಿದಿನ ದಾಳಿ ನಡೆಸುತ್ತಿದ್ದ ಅಲ್ಲದೇ ಒಸಾಮಾ ಬಿನ್‌ ಲಾಡೆನ್‌ ಹತ್ಯೆಯ ನಂತರ ಅಲ್‌ಖೈದಾ ಉಗ್ರಗಾಮಿ ಸಂಘಟನೆಯ ಎರಡನೇ ನಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ.

ಅಲ್‌ ಖೈದಾ ಅತಿಯಾ ಅಬ್ದ್‌ ಅಲ್‌ ರೆಹಮಾನ್‌ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ಡಾಲರ್ ಬಹುಮಾನ ನೀಡುವುದಾಗಿ ಘೋಷಿಸಿತ್ತು.

ಅಲ್‌ಖೈದಾ ಸಂಘಟನೆಯ ದಾಳಿ ರೂಪಿಸುವುದು ಹಾಗೂ ಪ್ರಚಾರ ಕಾರ್ಯ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅತಿಯಾ ಅಬ್ದ್‌ ಅಲ್‌ ರೆಹಮಾನ್‌ ಜೊತೆಗೂಡಿ ಕಾರ್ಯನಿರ್ವಹಿಸುವ ಮೂಲಕ ಉಗ್ರಗಾಮಿ ಸಂಘಟನೆಯನ್ನು ಸಂಘಟಿಸುವ ಮೂಲಕ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಐಮನ್‌ ಅಲ್‌ ಜವಾಹಿರಿ ಯತ್ನಿಸಿದ್ದ ಎಂದು ಹೆಸರು ಹೇಳಲಿಚ್ಛಿಸದ ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ