ಇಸ್ರೇಲ್ ದಾಳಿ-ಬರಾಕ್ ಮೌನಕ್ಕೆ ಅರಬ್‍‌‌ರ ಆಕ್ರೋಶ

ಶನಿವಾರ, 3 ಜನವರಿ 2009 (17:49 IST)
ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿರುವ ದಾಳಿಯ ಬಗ್ಗೆ ಮೌನ ತಾಳಿರುವ ಅಮೆರಿಕದ ನಿಯೋಜಿತ ಅಧ್ಯಕ್ಷ ಬರಾಕ್ ಒಮಾಮ ಅವರ ವಿರುದ್ಧ ಅಮೆರಿಕದಲ್ಲಿನ ಅರಬ್ ಮುಸ್ಲಿಂರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಅಮೆರಿಕದ ಹಿಂದಿನ ಚಾಳಿಗೆ ಬರಾಕ್ ಅವರು ಸಮ್ಮತಿ ಸೂಚಿಸುವ ಲಕ್ಷಣವಾಗಿದೆ ಎಂದು ಆರೋಪಿಸಿದ್ದಾರೆ.

ಇದೀಗ ಇಸ್ರೇಲ್ ದಾಳಿ ಕುರಿತು ತುಟಿ ಬಿಚ್ಚದಿರುವ ಬರಾಕ್ ಬಗ್ಗೆ ಪ್ಯಾಲೆಸ್ತೇನ್‌ನಿಂದ ಅಮೆರಿಕಕ್ಕೆ ವಲಸೆ ಬಂದಿರುವ ಅರಬ್‌ರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿಯೋಜಿತ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಒಬಾಮ ಅವರು ಕೇವಲ ಅಮೆರಿಕದ ಆರ್ಥಿಕ ವ್ಯವಸ್ಥೆ ಹಾಗೂ ಮುಂಬೈ ದಾಳಿಯ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.

ಆ ನಿಟ್ಟಿನಲ್ಲಿ ನೂರಾರು ಅರಬ್‌ರು ಇಸ್ರೇಲ್ ರಾಯಭಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಇಸ್ರೇಲ್ ವಿರೋಧಿ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ತಡೆದು,ಕೆಲವರನ್ನು ಬಂಧಿಸಿ ಬಿಡುಗಡೆಗೊಳಿಸಿದರು. ಆದರೆ ಈ ಸಂದರ್ಭದಲ್ಲಿ ಗಮನ ಸೆಳೆದ ಒಂದು ಬ್ಯಾನರ್‌ನಲ್ಲಿ ಈ ರೀತಿ ಬರೆಯಲಾಗಿತ್ತು. 'ಇಸ್ರೇಲ್ ಸಮರದ ಹಿಂದಿನ ನಿಜವಾದ ಭಯೋತ್ಪಾದಕ ಅಮೆರಿಕ'!

ವೆಬ್ದುನಿಯಾವನ್ನು ಓದಿ