ಇಸ್ರೇಲ್ ಮಾಜಿ ಪ್ರಧಾನಿ ಓಲ್ಮರ್ಟ್ ವಿರುದ್ಧ ಲಂಚದ ಆರೋಪ

ಸೋಮವಾರ, 31 ಮಾರ್ಚ್ 2014 (19:18 IST)
PR
PR
ಟೆಲ್ ಅವೀವ್: ಇಸ್ರೇಲಿನ ಕೋರ್ಟೊಂದು ಮಾಜಿ ಪ್ರಧಾನಮಂತ್ರಿ ಎಹುದ್ ಓಲ್ಮರ್ಟ್ ಅವರನ್ನು ಲಂಚದ ಆರೋಪದ ಮೇಲೆ ದೋಷಿಯನ್ನಾಗಿಸಿದೆ. ಜೆರುಸಲೇಂ ಮೇಯರ್ ಹುದ್ದೆ ನಿರ್ವಹಿಸುತ್ತಿದ್ದಾಗ ಸ್ಥಿರಾಸ್ತಿ ವಹಿವಾಟಿಗೆ ಸಂಬಂಧಿಸಿದಂತೆ ಲಂಚ ತೆಗೆದುಕೊಂಡಿದ್ದಾರೆಂದು ಆರೋಪಿಸಲಾಗಿದ್ದು, ಇದರಿಂದ ಅವರಿಗೆ ತೀವ್ರ ರಾಜಕೀಯ ಹಿನ್ನಡೆ ಉಂಟಾಗಿದೆ.ಪ್ಯಾಲೆಸ್ತೀನಿಯರ ಜತೆಗೆ ಶಾಂತಿ ಮೂಡಿಸಲು ಶ್ರಮಿಸಿದ ಓಲ್ಮರ್ಟ್ ಹೋಲಿಲ್ಯಾಂಡ್ ಅಪಾರ್ಟ್‌ಮೆಂಟ್ ಸಂಕೀರ್ಣ ಒಪ್ಪಂದ ಮತ್ತು ಇತರ ಭ್ರಷ್ಟಾಚಾರ ಆರೋಪಗಳಲ್ಲಿ ತಪ್ಪುಮಾಡಿದ್ದನ್ನು ನಿರಾಕರಿಸಿದ್ದಾರೆ.

2008ರಲ್ಲಿ ಈ ಆರೋಪಗಳಿಂದಾಗಿ ಅವರು ರಾಜೀನಾಮೆ ಸಲ್ಲಿಸಿದ್ದರು. ಜೆರುಸಲೆಂ ಮೇಯರ್ ಮತ್ತು ಇಸ್ರೇಲಿ ಕ್ಯಾಬಿನೆಟ್ ಸಚಿವರಾಗಿ ಕಾರ್ಯನಿರ್ವಹಿಸಿದ್ದಾಗ ಅಮೆರಿಕದ ಉದ್ಯಮಿ ಜತೆ ನಂಟಿಗೆ ಸಂಬಂಧಿಸಿದಂತೆ ಪ್ರತ್ಯೇಕ ಕೇಸುಗಳಿಂದ ಅವರು ಖುಲಾಸೆಗೊಳಗಾಗಿದ್ದರು.

ವೆಬ್ದುನಿಯಾವನ್ನು ಓದಿ