ಇಸ್ಲಾಂ ಧರ್ಮವನ್ನು, ಮುಸ್ಲಿಮರನ್ನು ನಿಷೇಧಿಸಿತು ಅಂಗೋಲಾ

ಸೋಮವಾರ, 25 ನವೆಂಬರ್ 2013 (19:40 IST)
PR
PR
ಅಂಗೋಲಾ: ಅಂಗೋಲಾ ಇಸ್ಲಾಂ ಧರ್ಮವನ್ನು ಮತ್ತು ಮುಸ್ಲಿಮರನ್ನು ಜಗತ್ತಿನಲ್ಲಿ ನಿಷೇಧಿಸಿದ ಮೊದಲ ಆಫ್ರಿಕನ್ ರಾಷ್ಟ್ರವಾಗಲಿದೆ. ಇಸ್ಲಾಂ ಧರ್ಮವನ್ನು ಕಾನೂನುಬದ್ಧಗೊಳಿಸುವ ಪ್ರಕ್ರಿಯೆಗೆ ಮಾನವ ಹಕ್ಕು ಮತ್ತು ನ್ಯಾಯ ಸಚಿವಾಲಯ ಅನುಮೋದನೆ ನೀಡಿಲ್ಲ. ಮುಂದಿನ ನೋಟಿಸ್ ಬರುವ ತನಕ ಅವರ ಮಸೀದಿಗಳನ್ನು ಮುಚ್ಚಲಾಗುತ್ತದೆ ಎಂದು ಅಂಗೋಲಾದ ಸಂಸ್ಕೃತಿ ಸಚಿವ ರೋಸಾ ಕ್ರಜ್ ಎ ಸಿಲ್ವಾ ಹೇಳಿದ್ದಾರೆ. ನಿಷೇಧದ ಭಾಗವಾಗಿ, ಅಂಗೋಲಾ ಸರ್ಕಾರ, ದೇಶ ಮಸೀದಿಗಳ ನೆಲಸಮಕ್ಕೆ ಅದೇಶಿಸಿದೆ.

ದೇಶದಲ್ಲಿ ಅಕ್ರಮವಾಗಿ ತಲೆಯೆತ್ತಿರುವ ಧಾರ್ಮಿಕ ಪಂಥಗಳನ್ನು ನಿಷೇಧಿಸುವ ಪ್ರಯತ್ನಗಳ ಸರಣಿಯಲ್ಲಿ ಇದು ಇತ್ತೀಚಿನ ನಿರ್ಧಾರವಾಗಿದೆ. ಅಂಗೋಲಾ ಸಂಸ್ಕೃತಿಯ ಸಂಪ್ರದಾಯಗಳಿಗೆ ವಿರುದ್ಧವಾದ ಪ್ರಾರ್ಥನಾಮಂದಿಗಳ ವಿರುದ್ಧ ಹೋರಾಟ ಮಾಡುತ್ತಿರುವುದರಿಂದ ಈ ಕ್ರಮ ಅಗತ್ಯವಾಗಿದೆ.ಇಸ್ಲಾಂ ಮಾತ್ರವಲ್ಲದೇ, ಕಾನೂನುಬದ್ಧವಲ್ಲದ ಎಲ್ಲ ಧಾರ್ಮಿಕ ಮಂದಿರಗಳನ್ನು ಮುಚ್ಚುವ ಭೀತಿ ಎದುರಿಸಿದೆ.

ವೆಬ್ದುನಿಯಾವನ್ನು ಓದಿ