ಈ ಯುವತಿಯ ಕನ್ವತ್ವದ ಬೆಲೆ 4 ಲಕ್ಷ ಡಾಲರ್!

ಮಂಗಳವಾರ, 1 ಏಪ್ರಿಲ್ 2014 (13:44 IST)
ನ್ಯೂಯಾರ್ಕ್: ಅಮೆರಿಕದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ಅತಿ ಹೆಚ್ಚು ಹರಾಜಿನ ಮೊತ್ತ ಸೂಚಿಸುವ ಆನ್‌ಲೈನ್ ಬಿಡ್‌ದಾರರಿಗೆ ತನ್ನ ಕನ್ಯತ್ವವನ್ನು ಹರಾಜು ಹಾಕಲು ಯೋಜಿಸಿದ್ದಾಳೆ. ಈ ಹರಾಜಿನ ಮೂಲಕ 400,000 ಡಾಲರ್ ಜೇಬಿಗಿಳಿಸಲು ಯುವತಿ ನಿರ್ಧರಿಸಿದ್ದಾಳೆ.ಎಲಿಜಬೆತ್ ರೈನ್(ಇದು ನಿಜವಾದ ಹೆಸರಲ್ಲ) ಹರಾಜುದಾರರಿಗೆ ತನ್ನ ಬಗ್ಗೆ ಹೆಚ್ಚು ತಿಳಿಯಲು ವೆಬ್‌ಸೈಟ್ ಒಂದನ್ನು ಸೃಷ್ಟಿಸಿದ್ದು, ಕನ್ಯತ್ವವನ್ನು ಕಳೆದುಕೊಳ್ಳುವ ತನ್ನ ನಿರ್ಧಾರದ ಬಗ್ಗೆ ವಿವರಣೆ ನೀಡಿದ್ದಾಳೆ. ಒಳಉಡುಪಿನಲ್ಲಿ ವೆಬ್‌ಸೈಟ್‌ಗೆ ಭಂಗಿ ನೀಡಿರುವ 27 ವರ್ಷದ ಕನ್ಯೆ ಮುಖವನ್ನು ಮುಚ್ಚಿಕೊಂಡಿದ್ದು, ಹರಾಜಿನ ಬಗ್ಗೆ ಮಾಹಿತಿ ನೀಡಿದ್ದಾಳೆ.

ಬ್ರೆಜಿಲ್ ವಿದ್ಯಾರ್ಥಿನಿಯೊಬ್ಬಳು ಈ ರೀತಿ ಹರಾಜಿಗೆ ಎರಡು ಬಾರಿ ಪ್ರಯತ್ನಿಸಿ ವಿಫಲಳಾಗಿದ್ದಳು.ಆದರೆ ರೈನ್ ಇದು ಶೇ. 99.7ರಷ್ಟು ಖಚಿತ ಎಂದು ಹೇಳಿದ್ದಾಳೆ.ಹರಾಜುದಾರನಿಗೆ 12ಗಂಟೆಗಳ ಡೇಟ್ ಮತ್ತು ಕನ್ಯತ್ವವನ್ನು ಧಾರೆಯೆರೆಯುವುದಾಗಿ ಅವಳು ಭರವಸೆ ನೀಡಿದ್ದಾಳೆ. ತನಗೆ ಸಿಗುವ ಹಣದಲ್ಲಿ ಶೇ. 35ರಷ್ಟು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಹಿಳಾ ಶಿಕ್ಷಣಕ್ಕೆ ನೆರವಾಗುವ ಧರ್ಮಕಾರ್ಯಕ್ಕೆ ನೀಡುವುದಾಗಿ ತಿಳಿಸಿದ್ದಾಳೆ.

ವೆಬ್ದುನಿಯಾವನ್ನು ಓದಿ