ಉಗ್ರರ ನಿಗ್ರಹಕ್ಕೆ ಪಾಕಿಸ್ತಾನ ಬದ್ಧ: ಚೀನಾಕ್ಕೆ ಜರ್ದಾರಿ

ಬುಧವಾರ, 31 ಆಗಸ್ಟ್ 2011 (17:01 IST)
ಚೀನಾದ ಕ್ಸಿನ್‌ ಜಿಯಾಂಗ್‌ ಪ್ರಾಂತ್ಯದಲ್ಲಿ ಉಗ್ರರನ್ನು ಹತ್ತಿಕ್ಕಲು ಪಾಕಿಸ್ತಾನ ಸಂಪೂರ್ಣ ಸಹಕಾರ ನೀಡಲಿದೆ ಎಂದು ಪಾಕ್‌ ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ಭರವಸೆ ನೀಡಿದ್ದಾರೆ. ಪಾಕಿಸ್ತಾನದಲ್ಲಿ ತರಬೇತಿ ಪಡೆದ ಉಗ್ರರು ಕ್ಸಿನ್‌ ಜಿಯಾಂಗ್‌ ಪ್ರಾಂತ್ಯದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂದು ಚೀನಾ ಆಪಾದಿಸಿತ್ತು.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಚೀನಾದ ವಾಯುವ್ಯ ಭಾಗದಲ್ಲಿರುವ ಕ್ಸಿನ್‌ ಜಿಯಾಂಗ್‌ ಪ್ರಾಂತ್ಯದ ರಾಜಧಾನಿ ಉರ್‌ಮೂಕಿಗೆ ಭೇಟಿ ನೀಡಿರುವ ಜರ್ದಾರಿ ಈ ಪ್ರಾಂತ್ಯದಲ್ಲಿ ಉಗ್ರರನ್ನು ನಿಗ್ರಹಿಸಲು ಪಾಕಿಸ್ತಾನ ಬದ್ಧವಾಗಿದೆ ಎಂದು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ಹೇಳಿದ್ದಾರೆ.

ಕ್ಸಿನ್‌ ಜಿಯಾಂಗ್‌ ಪ್ರಾಂತ್ಯದಲ್ಲಿ ಉಗ್ರರನ್ನು ನಿಗ್ರಹಿಸಲು ಪಾಕಿಸ್ತಾನ ಸಂಪೂರ್ಣ ಸಹಕಾರ ನೀಡಲಿದೆ ಎಂದು ಪಾಕಿಸ್ತಾನದ ಅಧ್ಯಕ್ಷ ಜರ್ದಾರಿ ಕ್ಸಿನ್‌ ಜಿಯಾಂಗ್‌ ಉಯ್‌ಗೂರ್‌ ಪ್ರಾಂತ್ಯದ ಸ್ವಾಯತ್ತ ಪ್ರದೇಶದ ಆಡಳಿತಾರೂಢ ಚೀನಾ ಕಮ್ಯುನಿಸ್ಟ್‌ ಪಕ್ಷ (ಸಿಪಿಸಿ)ದ ಕಾರ್ಯದರ್ಶಿ ಜಾಂಗ್‌ ಚುನ್‌ಕ್ಸಿಯಾನ್‌ ಅವರಿಗೆ ಭರವಸೆ ನೀಡಿದ್ದಾರೆ ಎಂದು ಪಾಕಿಸ್ತಾನ ಸರಕಾರಿ ಸುದ್ದಿ ಸಂಸ್ಥೆ ಎಪಿಪಿ ನ್ಯೂಸ್‌ ಏಜೆನ್ಸಿ ವರದಿ ಮಾಡಿದೆ.

ದೇಶದ ಗಡಿಯಾಚೆಗೆ ತರಬೇತಿ ಪಡೆದ ಪಾಕಿಸ್ತಾನ ಮೂಲದ ಈಸ್ಟ್‌ ಟರ್ಕಿಸ್ತಾನ್‌ ಇಸ್ಲಾಮಿಕ್‌ ಮೂವ್‌ಮೆಂಟ್‌ (ಇಟಿಐಎಂ)ಭಯೋತ್ಪಾದಕರು ಉಗ್ರವಾದಿ ಧಾರ್ಮಿಕ ಸಂಘಟನೆಯ ಜತೆ ಸೇರಿಕೊಂಡು ಈ ದಾಳಿ ನಡೆಸಿದ್ದಾರೆ ಎಂದು ಸ್ಥಳೀಯ ಆಡಳಿತ ಆಗಸ್ಟ್‌ 1ರಂದು ಆಪಾದಿಸಿದ್ದ ಹಿನ್ನೆಲೆಯಲ್ಲಿ ಪಾಕ್‌ ಅಧ್ಯಕ್ಷ ಆಸಿಫ್‌ ಆಲಿ ಜರ್ದಾರಿ ಭೇಟಿ ಮಹತ್ವ ಪಡೆದಿದೆ.

ಕ್ಸಿನ್‌ ಜಿಯಾಂಗ್‌ನ ಉರ್‌ಮೂಕಿಯಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿರುವ ಚೈನಾ -ಯುರಾಸಿಯಾ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಜರ್ದಾರಿ ಕ್ಸಿನ್‌ ಜಿಯಾಂಗ್‌ಗೆ ಆಗಮಿಸಿದ್ದು, ಇದೇ ಸಂದರ್ಭದಲ್ಲಿ ಚೀನಾದ ಉಪ ಪ್ರಧಾನಿ ಕಾಕ್ವಿಂಗ್‌ ಅವರನ್ನೂ ಭೇಟಿ ಮಾಡಲಿದ್ದಾರೆ.

ವೆಬ್ದುನಿಯಾವನ್ನು ಓದಿ