ಎಚ್ಚರ.. ನಿಮ್ಮ ಕಂಪ್ಯೂಟರ್‌ನಲ್ಲಿದ್ದಾನೆ ಕಳ್ಳ .

ಸೋಮವಾರ, 25 ನವೆಂಬರ್ 2013 (13:43 IST)
PR
PR
ನಿಮ್ಮ ಕಂಪ್ಯೂಟರ್‌ನಲ್ಲಿ ಕಳ್ಳನೊಬ್ಬ ಕುಳಿತಿದ್ದಾನೆ. ಆ ಕಳ್ಳ ನಿಮ್ಮ ಕಂಪ್ಯೂಟರ್‌ನಲ್ಲಿನ ಗುಪ್ತ ಮಾಹಿತಿಗಳನ್ನು ನಿಮಗೇ ಗೊತ್ತಿಲ್ಲದ್ದೇ ಕದ್ದು ಮತ್ತೊಬ್ಬರಿಗೆ ರವಾನಿಸುತ್ತಿದ್ದಾನೆ. ಅಷ್ಟೆ ಅಲ್ಲ, ನಿಮ್ಮ ಕಂಪ್ಯೂಟರ್‌ ಒಳಗೆ ಇರುವ ಆ ಕಳ್ಳನ ಸಹಾಯದಿಂದ ನಿಮ್ಮ ಕಂಪ್ಯೂಟರ್‌ಗಳನ್ನೇ ಹ್ಯಾಕ್ ಮಾಡಲು ಸಿದ್ದರಾಗಿದ್ದಾರೆ ಸಾವಿರರು ಜನರು..!

ಹೌದು.. ವಿಶ್ವಾದ್ಯಂತ ಕಂಪ್ಯೂಟರ್, ಮೊಬೈಲ್ ಸಂಭಾಷಣೆಗಳ ದಾಖಲೆ ಸಂಗ್ರಹಿಸುತ್ತಿದ್ದ ಅಮೆರಿಕದ ನ್ಯಾಷನಲ್ ಸೆಕ್ಯುರಿಟಿ ಏಜೆನ್ಸಿಯು ಇದೀಗ ವಿಶ್ವಾದ್ಯಂತ ಇರುವ 50 ಸಾವಿರಕ್ಕೂ ಹೆಚ್ಚು ಕಂಪ್ಯೂಟರ್‌ಗಳನ್ನು ಹ್ಯಾಕ್ ಮಾಡಲು ಸಂಚು ರೂಪಿಸಿದೆ. ಈ ಕೆಲಸಕ್ಕಾಗಿ ಸಾವಿರಕ್ಕೂ ಹೆಚ್ಚು ಐಟಿ ತಜ್ಞರನ್ನು ಅಮೇರಿಕಾ ಸರ್ಕಾರ ನೇಮಿಸಿಕೊಂಡಿದೆ ಎಂಬ ಗಂಭೀರ ವಿಷಯ ಇದೀಗ ಬಯಲಾಗಿದೆ.

ನಿಮಗಿದು ಗೊತ್ತೇ..? ಈಗಾಗಲೇ ಆ ಹ್ಯಾಕಿಂಗ್ ಸಾಫ್ಟ್‌ವೇರ್‌ ನಿಮ್ಮ ಕಂಪ್ಯೂಟರ್‌ನಲ್ಲಿ ಇನ್‌ಸ್ಟಾಲ್‌ ಆಗಿದೆ..! ಮುಂದಿನ ಪುಟದಲ್ಲಿ ಇನ್ನಷ್ಟು ಮಾಹಿತಿ...

PR
PR
ಯಾವ ಸಾಫ್ಟ್‌ವೇರ್‌ ಮೂಲಕ ಹ್ಯಾಕ್ ಮಾಡ್ತಾರೆ?

ಅಮೆರಿಕ ಸೇರಿದಂತೆ, ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಮೊಬೈಲ್ ಹಾಗೂ ಇಂಟರ್ನೆಟ್ ಸೇವೆ ಮೇಲೆ ಕಣ್ಣಿಡುವುದು ಸಾಮಾನ್ಯ. ಅದಕ್ಕಾಗಿ ಕೆಲವು ಮಾಲ್‌ವೇರ್‌ಗಳನ್ನು ಬಳಸಿಕೊಂಡು ಆ ಮೂಲಕ ಮಾಹಿತಿಗಳನ್ನು ಸಂಗ್ರಹಿಸುವ ಕೆಲಸಕ್ಕೆ ಐಟಿ ತಜ್ಞರನ್ನು ಕೈ ಹಾಕಿದ್ದಾರೆ.

ಯಾವಾಗಿನಿಂದ ಹ್ಯಾಕ್ ಮಾಡುತ್ತಾರೆ?

ಕಂಪ್ಯೂಟರ್‌ಗಳನ್ನು ಹ್ಯಾಕ್ ಮಾಡುವ ಉದ್ದೇಶದಿಂದ 1998ರಿಂದಲೇ ಮಾಲ್‌ವೇರ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಎಂಬ ಭಯಾನಕ ಮಾಹಿತಿ ಇದೀಗ ಹೊರ ಬಿದ್ದಿದೆ. ನೆಟ್‌ವರ್ಕ್ ಎಕ್ಸ್‌ಪ್ಲೊರೇಷನ್ ಯೋಜನೆ ಮೂಲಕ ಮಾಲ್‌ವೇರ್‌ಗಳನ್ನು ಕಂಪ್ಯೂಟರ್‌ಗಳಿಗೆ ಇನ್‌ಸ್ಟಾಲ್ ಮಾಡಲಾಗುತ್ತದೆ. ನಂತರ ಆ ಮಾಲ್‌ವೇರ್‌ಗಳನ್ನು ಬಳಸಿಕೊಂಡು ಯಾರಿಗೂ ತಿಳಿಯದಂತೆ ಗುಪ್ತವಾಗಿ ಮಾಹಿತಿಗಳನ್ನು ಕದಿಯುವ ಯತ್ನವನ್ನು ಐಟಿ ತಜ್ಞರು ಮಾಡುತ್ತಿದ್ದಾರೆ. ಅಷ್ಟೆ ಅಲ್ಲ, ಇನ್ನೊಂದು ಅಚ್ಚರಿ ಮತ್ತು ಭಯಾನಕ ಮಾಹಿತಿ ಏನಪ್ಪಾ ಅಂದ್ರೆ ಈ ಮಾಲ್‌ವೇರ ಗಳು ಯಾರ ಗಮನಕ್ಕೂ ಬಾರದೆ ಹಲವು ವರ್ಷಗಳ ಕಾಲ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿವೆಯಂತೆ.

ವೆಬ್ದುನಿಯಾವನ್ನು ಓದಿ