ಐಎನ್‌‌ಎಸ್ ವಿಕ್ರಾಂತ ಮೇಲೆ ಲಷ್ಕರ್ ದಾಳಿ ಸಾಧ್ಯತೆ: ಯುಎಸ್

ಶನಿವಾರ, 3 ಜನವರಿ 2009 (17:37 IST)
ಭಾರತದ ಪ್ರಮುಖ ಯುದ್ದನೌಕೆ ಐಎನ್‌ಎಸ್ ವಿಕ್ರಾಂತ ಮೇಲೆ ಲಷ್ಕರ್ ಇ ತೊಯ್ಬಾ ವೈಮಾನಿಕ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಭಾರತದ ರಕ್ಷಣಾ ಸಂಸ್ಥೆ ಕಟ್ಟೆಚ್ಚರದಲ್ಲಿ ಇರಬೇಕು ಎಂದು ಅಮೆರಿಕದ ಬೇಹುಗಾರಿಕೆಯ ತಾಂತ್ರಿಕ ವಿಭಾಗ ಮುನ್ನೆಚ್ಚರಿಕೆ ನೀಡಿದೆ.

ಇದೀಗ ಯುದ್ದನೌಕೆ ವಿಕ್ರಾಂತ ಕೊಚ್ಚಿನ್ ಹಡಗು ಶಿಫ್‌ಯಾರ್ಡ್‌‌ನಲ್ಲಿ ರಿಪೇರಿ ನಡೆಯುತ್ತಿದೆ. ದಾಳಿಯ ಮುನ್ಸೂಚನೆ ನಂತರ ವಿಕ್ರಾಂತಗೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಆ ನಿಟ್ಟಿನಲ್ಲಿ ಉಗ್ರಗಾಮಿ ಸಂಘಟನೆ ಲಷ್ಕರ್ ಇ ತೊಯ್ಬಾ ವಿಕ್ರಾಂತ ಮೇಲೆ ದಾಳಿ ನಡೆಸುವ ಸಾಧ್ಯತೆ ಇರುವುದಾಗಿ ಗುಪ್ತಚರ ಇಲಾಖೆಯ ವರದಿ ಬಹಿರಂಗಪಡಿಸಿದೆ.

ಯಾವುದೇ ದಾಳಿಯನ್ನು ಎದುರಿಸಲು ತಾವು ಸನ್ನದ್ಧವಾಗಿರುವುದಾಗಿ ಕೊಚ್ಚಿ ಸಿಐಎಸ್‌ಎಫ್ ಸಹಾಯಕ ಕಮಾಂಡರ್ ವಿ.ಜಿ.ಮಾಕ್ರಮ್ ತಿಳಿಸಿದ್ದಾರೆ. ಅಲ್ಲದೇ ವಿಕ್ರಾಂತ್ ಸುತ್ತ ನೌಕ ಪಡೆ, ಕರಾವಳಿ ಪಡೆ , ಸಿಐಎಸ್ಎಫ್ ಹಾಗೂ ಪೊಲೀಸ ಪಡೆಯನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಐಎನ್‌‌ಎಸ್‌‌ ವಿಕ್ರಾಂತ್ ಭಾರತದ ಪ್ರಮುಖ ಯುದ್ಧನೌಕೆಯಾಗಿದ್ದು, ನೌಕಯಾನ ಮತ್ತು ವೈಮಾನಿಕ ದಾಳಿ ನಡೆಸುವಲ್ಲಿ ಇದರ ಪಾತ್ರ ಪ್ರಮುಖವಾಗಿದೆ.

ವೆಬ್ದುನಿಯಾವನ್ನು ಓದಿ