ಒಂದು ತಿಂಗಳಲ್ಲಿ 44,000 ಮಕ್ಕಳು ಅಶ್ಲೀಲ ಚಿತ್ರಗಳನ್ನು ನೋಡಿದ್ದಾರೆ

ಮಂಗಳವಾರ, 1 ಏಪ್ರಿಲ್ 2014 (14:02 IST)
PR
PR
ಲಂಡನ್: ಬ್ರಿಟನ್‌ನಲ್ಲಿ 44,000 ಪ್ರಾಥಮಿಕ ಶಾಲಾ ಮಕ್ಕಳು ಒಂದು ತಿಂಗಳಲ್ಲಿ ಅಶ್ಲೀಲ ವೆಬ್‌ಸೈಟ್‌ಗಳನ್ನು ಜಾಲಾಡಿರುವ ಆಘಾತಕಾರಿ ಸಂಗತಿ ಬಯಲಾಗಿದೆ. 6ರಿಂದ 11 ವರ್ಷ ವಯಸ್ಸಿನ ಪ್ರತಿ 35 ಮಕ್ಕಳಲ್ಲಿ ಒಬ್ಬನು ಈ ವೆಬ್‌ಸೈಟ್‌ನಲ್ಲಿ ಕಾಮಪ್ರಚೋದಕ ಚಿತ್ರಗಳನ್ನು ನೋಡಿದ್ದಾನೆ. 16 ವರ್ಷ ವಯಸ್ಸಿಗಿಂತ ಕಡಿಮೆಯಿರುವ 2 ಲಕ್ಷ ಮಂದಿ ಕಂಪ್ಯೂಟರ್‌ನಿಂದ ವಯಸ್ಕ ವೆಬ್‌ಸೈಟ್‌ಗಳನ್ನು ಜಾಲಾಡಿದ್ದಾರೆ. ಇಂತಹ ಅಶ್ಲೀಲ ಆನ್‌ಲೈನ್ ಚಿತ್ರಗಳ ವೀಕ್ಷಣೆಯಿಂದ ಮಕ್ಕಳನ್ನು ತಡೆಯುವುದಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಅಥಾರಿಟಿ ಫಾರ್ ಟೆಲಿವಿಷನ್ ಇನ್ ಡಿಮಾಂಡ್ ಕರೆ ನೀಡಿದೆ.

2013 ಡಿಸೆಂಬರ್‌ನಲ್ಲಿ ಮಕ್ಕಳು ಮತ್ತು ಹದಿವಯಸ್ಕರು ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಅಂತರ್ಜಾಲ ಬಳಸುವ ಬಗ್ಗೆ ನಿಗಾವಹಿಸಿತು. 18ಕ್ಕಿಂತ ಕಡಿಮೆ ಪ್ರಾಯದ ಐವರಲ್ಲಿ ಒಬ್ಬ ಬಾಲಕ ಡೆಸ್ಕ್‌ಟಾಪ್‌ನಲ್ಲಿ ಅಶ್ಲೀಲ ವೆಬ್‌ಸೈಟ್‍‌ಗಳನ್ನು ವೀಕ್ಷಿಸುತ್ತಾನೆ.ಒಂದು ವಯಸ್ಕ ಜಾಲತಾಣವು ಉಚಿತ, ಅನಿರ್ಬಂಧಿತ ಅವಕಾಶವನ್ನು ಒದಗಿಸಿದ್ದು, ಇದಕ್ಕೆ 112, 000 ಹದಿವಯಸ್ಕರನ್ನು ಆಕರ್ಷಿಸಿದೆ.

ವೆಬ್ದುನಿಯಾವನ್ನು ಓದಿ