ಕದ್ದಿದ್ದು 20 ರೂ ಬಾಳೆಹಣ್ಣು , ತೆರುತ್ತಿರುವುದು 37,272 ರೂಪಾಯಿ

ಶನಿವಾರ, 22 ಫೆಬ್ರವರಿ 2014 (18:10 IST)
PTI
ಎರಡು ಬಾಳೆಹಣ್ಣುಗಳನ್ನು ಕದ್ದಿದ್ದ 3 ಜನರ ವಿಚಾರಣೆಗೆ ನಿಕರಾಗುವಾ ದೇಶದ ನ್ಯಾಯಾಲಯವೊಂದು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಿದೆ.

ಕಳ್ಳರು ಕದ್ದ ಬಾಳೆಹಣ್ಣಿನ ಬೆಲೆ ಕೇವಲ 20 ರೂ. ಆದರೆ ವಿಚಾರಣಾ ವೆಚ್ಚ 37,272 ರೂಪಾಯಿಗಳಾಗಬಹುದೆಂದು ಅಂದಾಜಿಸಲಾಗಿದೆ.

ಕಳೆದ ಡಿಸೆಂಬರ್ ನಲ್ಲಿ ಹಣ್ಣಿನಂಗಡಿಯಿಂದ ಬಾಳೆಹಣ್ಣುಗಳನ್ನು ಕದ್ದು ಮೂವರು ಪುರುಷರು ಅಲ್ಲಿಂದ ಓಡಿ ಹೋದರು. ಆದರೆ ಅವರನ್ನು ಬಂಧಿಸಲಾಯಿತು. ಅವರಲ್ಲಿ 2 ರನ್ನು ಸ್ಥಳೀಯ ಜೈಲಿನಲ್ಲಿ ಮತ್ತು ಮೂರನೇ ವ್ಯಕ್ತಿಯನ್ನು ಗೃಹಬಂಧನ ದಲ್ಲಿಡಲಾಗಿದೆ ಎಂದು ಗುರುವಾರ ನಡೆದ ಪ್ರಕರಣದ ಪ್ರಾಥಮಿಕ ವಿಚಾರಣೆಯ ಸಂದರ್ಭದಲ್ಲಿ ಫಿರ್ಯಾದುದಾರರು ಹೇಳಿದ್ದಾರೆ. ಮುಂದಿನ ವಿಚಾರಣೆಯನ್ನು ಏಪ್ರಿಲ್ 23ಕ್ಕೆ ನಿಗದಿ ಪಡಿಸಲಾಗಿದೆ

" ಎರಡು ಬಾಳೆಹಣ್ಣಿನ ಮೇಲೆ ಸಾವಿರಾರು ರೂಪಾಯಿಯನ್ನು ವೆಚ್ಚ ಮಾಡುತ್ತಿರುವುದು ಹಾಸ್ಯಾಸ್ಪದ" ವಕೀಲ ಇವಾನ್ ಮೊರೇಲ್ಸ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ