ಕರಾಚಿ ಬ್ಲಾಸ್ಟ್ ಸಂಚು ರೂಪಿಸಿದ್ದೇ ಪಾಕ್ ಪೊಲೀಸ್ ಅಧಿಕಾರಿಗಳು!

ಶುಕ್ರವಾರ, 6 ಏಪ್ರಿಲ್ 2012 (16:57 IST)
PR
ದೇಶದ ಬಹುದೊಡ್ಡ ನಗರವಾದ ಕರಾಚಿಯಲ್ಲಿ ತನ್ನನ್ನು ಗುರಿಯಾಗಿಟ್ಟುಕೊಂಡು ನಡೆಸಿದ ಆತ್ಮಹತ್ಯಾ ಬಾಂಬ್ ದಾಳಿಯ ಸಂಚು ರೂಪಿಸಿದ್ದು ತನ್ನ ಮೂವರು ಸಹೋದ್ಯೋಗಿ ಪೊಲೀಸರು ಎಂದು ಪಾಕ್‌ನ ಹಿರಿಯ ಪೊಲೀಸ್ ಅಧಿಕಾರಿ ಗಂಭೀರವಾಗಿ ಆರೋಪಿಸಿದ್ದಾರೆ.

ಗುರುವಾರ ನಗರದಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಪೊಲೀಸರಿಬ್ಬರು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದರು. ಈ ಸಂಚಿನ ಹಿಂದೆ ಮೂರು ಪೊಲೀಸ್ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಕೆಲವು ದಾಖಲೆಯನ್ನು ಶುಕ್ರವಾರ ಪೊಲೀಸ್ ಅಧಿಕಾರಿ ಅನ್ವರ್ ಅಹ್ಮದ್ ಖಾನ್ ಸುದ್ದಿಗಾರರ ಜತೆ ಮಾತನಾಡುತ್ತ ಬಿಡುಗಡೆ ಮಾಡಿದರು.

ಘಟನೆಗೆ ಸಂಬಂಧಿಸಿದಂತೆ ತಾವು ಮೂವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಹೇಳಿದರು. ಏತನ್ಮಧ್ಯೆ ಅನ್ವರ್ ಅಹ್ಮದ್ ಖಾನ್ ಆರೋಪಿಸಿರುವ ಮೂವರು ಪೊಲೀಸ್ ಅಧಿಕಾರಿಗಳು ಈ ಬಗ್ಗೆ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ವೆಬ್ದುನಿಯಾವನ್ನು ಓದಿ