ಕಾರ್ಮಿಕರ ದಿನದಂದು ಕ್ಯೂಬಾದಲ್ಲಿ ಬೃಹತ್ ರ‌್ಯಾಲಿ

ಸೋಮವಾರ, 25 ಏಪ್ರಿಲ್ 2011 (16:31 IST)
ಮೇ 1, ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯಂದು ಕ್ಯೂಬಾದಲ್ಲಿ ರಾಷ್ಟ್ರವ್ಯಾಪಿ ಬೃಹತ್ ರ‌್ಯಾಲಿಯನ್ನು ಆಯೋಜಿಸಲಾಗಿದ್ದು, 50 ದೇಶಗಳ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ.

ಕಳೆದ 12 ವರ್ಷಗಳಿಂದ ಅಮೆರಿಕಾ ಸೆರೆಮನೆವಾಸದಲ್ಲಿರುವ ಐವರು ಕ್ಯೂಬಾ ಭಯೋತ್ಪಾದನಾ ವಿರೋಧಿ ಕಾರ್ಯಕರ್ತರನ್ನು ಆದಷ್ಟು ಬೇಗನೇ ಬಿಡುಗಡೆ ಮಾಡಬೇಕೆಂಬ ಬೇಡಿಕೆಯೊಂದಿಗೆ ಬೃಹತ್ ಮೆರವಣಿಗೆ ನಡೆಯಲಿದೆ.

ಗೆರಾರ್ಡೊ ಹೆರ್ನಾಂಡೆಜ್, ರಾಮೊನ್ ಲಾಬೈನೊ, ಆಂಟನಿಯೊ ಗುರೆರೊ, ಫೆರ್ನಾಂಡೊ ಗೊನ್ಸಾಲೆಜ್ ಮತ್ತು ರೆನನೆ ಗಾನ್ಜ್‌ರನ್ನು 1998ರಲ್ಲಿ ಮಿಯಾಮಿಯಲ್ಲಿ ಬಂಧಿಸಲಾಗಿತ್ತು. ಇದೀಗ ಸೆರೆಮನೆವಾಸ ಅನುಭವಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ