ಕೆಟ್ಟ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 3ನೇ ಸ್ಥಾನ

ಬುಧವಾರ, 30 ಅಕ್ಟೋಬರ್ 2013 (16:14 IST)
PTI
PTI
ಜಗತ್ತಿನ ಜನಸಂಖ್ಯೆಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಭಾರತ ದೇಶವು, ಇದೀಗ ವಾಣಿಜ್ಯ ವಿವಾದಗಳನ್ನು ಬಗೆಹರಿಸಿಕೊಳ್ಳುವ ವಿಷಯದಲ್ಲಿ ಜಗತ್ತಿನ ಮೂರನೆಯ ಅತಿ ಕೆಟ್ಟ ದೇಶವಾಗಿ ಗುರ್ತಿಸಿಕೊಂಡಿದೆ. ಜಗತ್ತಿನಲ್ಲಿ ವಾಣಿಜ್ಯ ವಿವಾದಗಳನ್ನು ಬಗೆಹರಿಸಿಕೊಳ್ಳುವಲ್ಲಿ ಯಾವ ದೇಶಗಳು ನಿರ್ಲಕ್ಷ್ಯತೆಯನ್ನು ತೋರುತ್ತಿದೆ ಎಂಬ ವಿಷಯವಾಗಿ ನಡೆಸಿದ ಸಮೀಕ್ಷೆಯಲ್ಲಿ ಭಾರತಕ್ಕೆ ಮೂರನೇ ಸ್ಥಾನ ದೊರಕಿದೆ.

ಕೇವಲ 5 ತಿಂಗಳ ಒಳಗಾಗಿ ಬಗೆಹರಿಸಿಕೊಳ್ಳಬಹುದಾದ ವಾಣಿಜ್ಯ ವಿವಾದಗಳನ್ನು ಭಾರತದ ದೇಶವು ಕನಿಷ್ಟ ಸುಮಾರು 4 ವರ್ಷಗಳನ್ನು ತೆಗೆದುಕೊಳ್ಳುತ್ತದೆಯಂತೆ. ಈ ನಿಟ್ಟಿನಲ್ಲಿ ಸಿಂಗಪೂರ್‌ ಉತ್ತಮ ಸ್ಥಾನದಲ್ಲಿದ್ದು ವಾಣಿಜ್ಯ ವಿವಾದಗಳನ್ನು ಕೇವಲ 5 ತಿಂಗಳ ಒಳಗಾಗಿ ಬಗೆಹರಿಸುತ್ತದೆಯಂತೆ.

ವ್ಯಾಪಾರ ಮತ್ತು ವಾಣಿಜ್ಯ ವಿಷಯಗಳಲ್ಲಿ ಕಂಡಬರುವ ದೂರುಗಳು, ವಿವಾದಗಳು, ಅಥವ ಇನ್ನಿತರೇ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಭಾರತ ಕಳಪೆ ಮಟ್ಟದ ಪ್ರದರ್ಶನವನ್ನು ತೋರುತ್ತಿದೆ ಎಂಬುದು ಈ ವರದಿಯಿಂದ ತಿಳಿದುಬರುತ್ತಿದೆ.

ವೆಬ್ದುನಿಯಾವನ್ನು ಓದಿ