ಕೊಲಂಬೊದಲ್ಲಿ ಭೂಕಂಪ

ಸೋಮವಾರ, 10 ಸೆಪ್ಟಂಬರ್ 2007 (20:05 IST)
ಕೊಲಂಬಿಯಾದ ಪೆಸಿಫಿಕ್ ತೀರದಲ್ಲಿ 6.8 ತೀವ್ರತೆಯ ಭೂಕಂಪ ಭಾನುವಾರ ರಾತ್ರಿ ಅಪ್ಪಳಿಸಿದೆ .ಅನೇಕ ಮನೆಗಳು ಕುಸಿದಿವೆ ಮತ್ತು ಗ್ರಾಮೀಣ ವಾಯವ್ಯ ಪ್ರದೇಶದಲ್ಲಿ ಕನಿಷ್ಠ ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಯಾವುದೇ ಸಾವು, ನೋವು ಸಂಭವಿಸಿದ ವರದಿಯಾಗಿಲ್ಲ.

ಸ್ಥಳೀಯ ಕಾಲಮಾನ 8.49ಕ್ಕೆ ಭೂಕಂಪ ಸಂಭವಿಸಿತು. ಬೊಗೋಟಾ ವಾಯವ್ಯಕ್ಕೆ ಸುಮಾರು 295 ಕಿಮೀ ದೂರದಲ್ಲಿ ಸಮುದ್ರಗರ್ಭದಲ್ಲಿ 6 ಮೈಲಿಗಳ ಆಳದಲ್ಲಿ ಭೂಕಂಪದ ಕೇಂದ್ರಬಿಂದುವಿತ್ತು.

ಕಾಲಿ ಮತ್ತು ಪೊಪಯಾನ್ ನಗರಗಳು ಸೇರಿದಂತೆ ಪಶ್ಚಿಮ ಕೊಲಂಬಿಯಾದ ಹಲವಾರು ರಾಜ್ಯಗಳಲ್ಲಿ ಭೂಕಂಪದ ಅನುಭವವಾಗಿದೆ. ಭೂಕಂಪದ ಕೇಂದ್ರಬಿಂದುವಿದ್ದ ಎಲ್ ಚಾರ್ಕೊ ನಗರದಲ್ಲಿ ನಾಲ್ವರು ಗಾಯಗೊಂಡಿದ್ದಾರೆ ಮತ್ತು ತೀರದ ಬಳಿಯ 20 ಮನೆಗಳು ಕುಸಿದುಬಿದ್ದಿವೆ.

ವೆಬ್ದುನಿಯಾವನ್ನು ಓದಿ