ಕ್ಯಾನ್ಸರ್; ಹ್ಯುಗೋ ಚಾವೆಜ್ ಭೇಟಿ ಮಾಡಿದ ಫಿಡೆಲ್ ಕ್ಯಾಸ್ಟ್ರೋ

ಶನಿವಾರ, 3 ಮಾರ್ಚ್ 2012 (18:19 IST)
PR
ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ವೆನಿಜುವೆಲಾ ಅಧ್ಯಕ್ಷ ಹ್ಯುಗೋ ಚಾವೆಜ್ ಅವರನ್ನು ಕ್ಯೂಬಾ ಅಧ್ಯಕ್ಷ ರೌಲ್ ಕ್ಯಾಸ್ಟ್ರೋ ಮತ್ತು ಅವರ ಸಹೋದರ ಫಿಡೆಲ್ ಕ್ಯಾಸ್ಟ್ರೋ ಅವರು ಭೇಟಿ ನೀಡಿ ಆರೋಗ್ಯ ವಿಚಾರಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಹ್ಯುಗೋ ಅವರಿಗೆ ಮೆಡಿಕಲ್ ಸರ್ಜರಿ ನಡೆಸಿದ ನಂತರ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿರುವುದಾಗಿ ದಿ ಯುನಿವಿಷನ್ ಟಿವಿ ಚಾನೆಲ್ ವರದಿ ಮಾಡಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಾವೆಜ್ ಅವರ ಜತೆ ಫಿಡೆಲ್ ಕ್ಯಾಸ್ಟ್ರೋ ಅವರು ಸುಮಾರು ಎರಡು ಗಂಟೆಗಳ ಕಾಲ ಕಳೆದಿರುವುದಾಗಿ ವೆನಿಜುವೆಲಾ ಮಾಹಿತಿ ಖಾತೆ ಸಚಿವ ಆಂಡ್ರೆಸ್ ಇಜ್ರಾ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಚಾವೆಜ್ ಅವರಿಗೆ ಸೋಮವಾರ ಶಸ್ತ್ರ ಚಿಕಿತ್ಸೆ ನಡೆಸಿ ಟ್ಯೂಮರ್ ಹೊರ ತೆಗೆಯಲಾಗಿದೆ ಎಂದು ಅವರು ವಿವರಿಸಿದ್ದು, ಇದೀಗ ಚಾವೆಜ್ ವಿಶ್ರಾಂತಿ ಪಡೆಯುತ್ತಿರುವುದಾಗಿ ವಿವರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ