ಗಡಾಫಿ ತವರೂರು ಸಿರ್ಟೆಯಲ್ಲಿ ಸ್ಫೋಟ; 100 ಬಲಿ

ಮಂಗಳವಾರ, 25 ಅಕ್ಟೋಬರ್ 2011 (19:14 IST)
ಲಿಬಿಯಾದ ಸರ್ವಾಧಿಕಾರಿ ಮುಅಮ್ಮರ್‌ ಗಡಾಫಿಯ ತವರೂರಾಗಿರುವ ಸಿರ್ಟೆಯಲ್ಲಿರುವ ತೈಲಾಗಾರದ ಸ್ಪೋಟದಲ್ಲಿ 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಗಡಾಫಿಯನ್ನು ಮಧ್ಯಂತರ ಸರಕಾರದ (ಎನ್‌ಟಿಸಿ) ಪಡೆಗಳು ಪತ್ತೆ ಹಚ್ಚಿ ಹತ್ಯೆ ಮಾಡಿದ ಕೆಲ ದಿನಗಳಲ್ಲೇ ಈ ಸ್ಫೋಟ ಸಂಭವಿಸಿದೆ ಎಂದು ಸೇನಾ ಕಮಾಂಡರ್‌ ಒಬ್ಬರು ತಿಳಿಸಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ತೈಲ ಟ್ಯಾಂಕ್‌ ಸ್ಫೋಟಿಸಿದ್ದರಿಂದ ಬೆಂಕಿ ಮುಗಿಲೆತ್ತರಕ್ಕೆ ಚಾಚಿದ್ದು, 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಲ್ಲದೇ 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಎನ್‌ಟಿಸಿ ಕಮಾಂಡರ್‌ ಲೈತ್‌ ಮಹಮದ್‌ ಹೇಳಿದ್ದಾರೆ.

ತೈಲದ ಟ್ಯಾಂಕ್‌ ಸ್ಫೋಟದಲ್ಲಿ ಸುಟ್ಟು ಕರಕಲಾದ ಡಜನ್‌ಗಟ್ಟಲೇ ಮೃತದೇಹಗಳ ದೃಶ್ಯವು ಕರುಳು ಹಿಂಡುವಂತಿತ್ತು ಎಂದು ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ