ಗಡೀಪಾರಿನಿಂದ ಪಾರಾಗಲು ಬುದ್ಧಿಮಾಂದ್ಯ ಯುವತಿಯರ ಮದುವೆ

ಸೋಮವಾರ, 6 ಜನವರಿ 2014 (18:24 IST)
PR
PR
ಲಂಡನ್: ಬ್ರಿಟನ್‌ನಿಂದ ಗಡೀಪಾರಾಗುವುದನ್ನು ತಪ್ಪಿಸಲು ಪಾಕಿಸ್ತಾನದ ಇಬ್ಬರು ಪುರುಷರು ಬುದ್ಧಿಮಾಂದ್ಯ ಬ್ರಿಟಿಷ್ ಮಹಿಳೆಯರನ್ನು ಮದುವೆಯಾದ ವಿಚಿತ್ರ ಘಟನೆ ನಡೆದಿದೆ. ಬ್ರಿಟನ್‌ನಲ್ಲಿ ಹೆಚ್ಚುವರಿ ವಾಸಕ್ಕೆ ಇಬ್ಬರು ಪಾಕಿಸ್ತಾನಿಯರಿಗೆ ವಲಸೆ ಅಧಿಕಾರಿಗಳು ಅನುಮತಿ ನಿರಾಕರಿಸಿದ ಬಳಿಕ ಅವರು ನಕಲಿ ವಿವಾಹವನ್ನು ಮಾಡಿಕೊಂಡಿದ್ದರು. ಲಂಡನ್ ಹೈಕೋರ್ಟ್ ಹಿರಿಯ ನ್ಯಾಯಾಧೀಶರು ಇವೆರಡು ವಿವಾಹಗಳ ಬಗ್ಗೆ ವಿವರ ನೀಡಿದರು. ಮೊದಲನೇ ಪ್ರಕರಣದಲ್ಲಿ , ಹರೆಯದ ಯುವತಿಗೆ ಕಲಿಕೆಯಲ್ಲಿ ತೊಂದರೆಯಿದ್ದು, 20 ವರ್ಷ ವಯಸ್ಸಿನ ಪಾಕಿಸ್ತಾನದ ಯುವಕನ ಜತೆ ಸಂಬಂಧ ಬೆಳೆಸಿದಳು.

ಆದರೆ ಸೆಕ್ಸ್ ಮತ್ತು ವಿವಾಹಕ್ಕೆ ಕಾನೂನಿನ ಮನ್ನಣೆ ಸಿಗದಿರುವುದರಿಂದ ಪಾಕಿಸ್ತಾನಿಯ ಕೃತ್ಯ ಅಪರಾಧವೆನಿಸಬಹುದು ಎಂದು ಕೌನ್ಸಿಲ್ ಅಧಿಕಾರಿಗಳು ಮತ್ತು ಪೊಲೀಸರು ಎಚ್ಚರಿಕೆ ನೀಡಿದ್ದರೂ ಅವರು 18 ತಿಂಗಳ ಹಿಂದೆ ವಿವಾಹ ಮಾಡಿಕೊಂಡಿದ್ದರು.

ಎರಡನೇ ಪ್ರಕರಣದಲ್ಲಿ ಇನ್ನೊಬ್ಬ ಪಾಕಿಸ್ತಾನಿ 30ರ ವಯಸ್ಸಿನ ಮಹಿಳೆಯನ್ನು ಮದುವೆಯಾಗಿದ್ದ. ಅವನ ವಲಸೆ ಅವಧಿ ಮುಗಿದಿದ್ದರಿಂದ ಬ್ರಿಟನ್‌ನಲ್ಲಿ ಉಳಿಯಲು ವಲಸೆ ಅಧಿಕಾರಿಗಳು ನಿರಾಕರಿಸಿದ್ದರು. ಮಹಿಳೆಯ ತಂದೆಗೆ 20,000 ಪೌಂಡ್ ವಧುದಕ್ಷಿಣೆ ಕೂಡ ಕೊಟ್ಟಿದ್ದಾನೆ ಎಂದು ಮಾಹಿತಿದಾರ ಬಹಿರಂಗ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ