ಗಾಜಾ ಮೇಲಿನ ದಾಳಿ ನಿಲ್ಲಿಸಿ: ಚೀನಾ ತಾಕೀತು

ಶನಿವಾರ, 3 ಜನವರಿ 2009 (20:32 IST)
ಗಾಜಾಪಟ್ಟಿ ಮೇಲಿನ ದಾಳಿಯನ್ನು ಕೂಡಲೇ ನಿಲ್ಲಿಸುವಂತೆ ಚೀನಾ ಇಸ್ರೇಲ್‌ಗೆ ತಾಕೀತು ಮಾಡಿದ್ದು, ಶನಿವಾರದಿಂದ ಆರಂಭಿಸಿರುವ ವೈಮಾನಿಕ ದಾಳಿಯಲ್ಲಿ ಈವರೆಗೆ 300ಮಂದಿ ಬಲಿಯಾಗಿದ್ದಾರೆ.

ಮಧ್ಯಏಷ್ಯಾದಲ್ಲಿನ ಶಾಂತಿ ಪ್ರಕ್ರಿಯೆ ಮುಂದುವರಿಯಬೇಕಾಗಿದ್ದು, ಆ ನಿಟ್ಟಿನಲ್ಲಿ ಪ್ಯಾಲೇಸ್ತೇನ್ ಮೇಲಿನ ದಾಳಿಯನ್ನು ಇಸ್ರೇಲ್ ಕೈಬಿಡಬೇಕು ಎಂದು ಚೀನಾ ಉಪಪ್ರಧಾನಿ ಲಿ ಕೆಕ್ವಾಂಗ್ ಅವರು ತಿಳಿಸಿರುವುದಾಗಿ ವಿದೇಶಾಂಗ ಸಚಿವಾಲಯದ ವೆಬ್‌ಸೈಟ್ ವರದಿ ಹೇಳಿದೆ.

ಹಮಾಸ್ ಆಡಳಿತದ ಗಾಜಾಪಟ್ಟಿ ಮೇಲೆ ಇಸ್ರೇಲ್ ಶನಿವಾರದಂದು ವೈಮಾನಿಕ ದಾಳಿ ನಡೆಸಿತ್ತು,ಅದು ಭಾನುವಾರವೂ ಕೂಡ ಮುಂದುವರಿದಿರುವ ಹಿನ್ನೆಲೆಯಲ್ಲಿ ಚೀನಾ ಈ ಮನವಿಯನ್ನು ಮಾಡಿದೆ.

ವಿಶ್ವಸಂಸ್ಥೆಯ ರಕ್ಷಣಾ ಮಂಡಳಿಯ ಸದಸ್ಯ ರಾಷ್ಟ್ರಗಳಲ್ಲಿ ಚೀನಾ ಕೂಡ ಒಂದಾಗಿದ್ದು, ಇದೀಗ ಗಾಜಾ ಮೇಲಿನ ದಾಳಿ ವಿರುದ್ಧ ಧ್ವನಿ ಎತ್ತುವ ಮೂಲಕ ಪ್ಯಾಲೆಸ್ತೇನ್‌ಗೆ ಬೆಂಬಲ ಸೂಚಿಸಿದೆ.

ವೆಬ್ದುನಿಯಾವನ್ನು ಓದಿ