ಗಾಜಾ ಮೇಲೆ ಇಸ್ರೇಲ್ ದಾಳಿ ಮುಂದುವರಿಕೆ

ಶನಿವಾರ, 3 ಜನವರಿ 2009 (20:33 IST)
ಹಮಾಸ್ ಆಡಳಿತಾರೂಢ ಗಾಜಾಪಟ್ಟಿ ಮೇಲಿನ ದಾಳಿಯನ್ನು ಇಸ್ರೇಲ್ ಸೋಮವಾರವೂ ಕೂಡ ವೈಮಾನಿಕ ದಾಳಿಯನ್ನು ಮುಂದುವರಿಸಿದ್ದು, ಈವರೆಗೆ ಒಟ್ಟು 307ಮಂದಿ ಸಾವನ್ನಪ್ಪಿದ್ದಾರೆ.

ಗಾಜಾಪಟ್ಟಿ ಹಾಗೂ ಪ್ರತ್ಯೇಕತಾವಾದ ವಿವಾದ ಸಮಸ್ಯೆ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಇಸ್ರೇಲ್ ಶನಿವಾರ ಪ್ಯಾಲೇಸ್ತೇನಿನ ಗಾಜಾಪಟ್ಟಿ ಮೇಲೆ ವೈಮಾನಿಕ ದಾಳಿ ಆರಂಭಿಸಿತ್ತು.

ದಕ್ಷಿಣ ಇಸ್ರೇಲ್ ಭಾಗದಲ್ಲಿ ದಾಳಿಯನ್ನು ಮುಂದುವರಿಸಲಾಗುತ್ತಿದೆ ಎಂದು ಇಸ್ರೇಲ್ ಪ್ರಧಾನಿ ಒಲ್‌ಮಾರ್ಟ್ ಅವರ ವಕ್ತಾರ ಮಾರ್ಕ್ ರೇಗೆವ್ ಅವರು ತಿಳಿಸಿದ್ದು, ಈ ದಾಳಿ ಕೆಲವು ದಿನಗಳ ಕಾಲ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಇದೀಗ ಇಸ್ರೇಲ್ ಯುದ್ಧ ಟ್ಯಾಂಕ್‌ಗಳು, ಸೈನಿಕ ಪಡೆ ಗಾಜಾಪಟ್ಟಿಯತ್ತ ಧಾವಿಸುತ್ತಿದ್ದು, ಸುಮಾರು 1.5ಮಿಲಿಯನ್‌ಷ್ಟು ಪ್ಯಾಲೇಸ್ಟೇನ್ ಜನಸಂಖ್ಯಾ ಬಾಹುಳ್ಳವುಳ್ಳ ಪ್ರದೇಶದತ್ತ ಮುನ್ನುಗ್ಗುತ್ತಿದೆ.

ಹಮಾಸ್‌ನ 180ಜನ ಹಾಗೂ ಮಹಿಳೆಯರು, ಮಕ್ಕಳು ಸೇರಿದಂತೆ 300ಕ್ಕೂ ಅಧಿಕ ಜನ ದಾಳಿಗೆ ಬಲಿಯಾಗಿದ್ದಾರೆಂದು ಹಮಾಸ್ ಅಧಿಕಾರಿಗಳು ತಿಳಿಸಿದ್ದಾರೆ. ಇಸ್ರೇಲ್ ಹಮಾಸ್‌ನಲ್ಲಿರುವ ಪ್ರಮುಖ ಇಸ್ಲಾಮಿಕ ಯೂನಿರ್ವಸಿಟಿಯ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿರುವುದಾಗಿ ಹೇಳಿದೆ. ಇದು ಗಾಜಾಪಟ್ಟಿಯಲ್ಲಿನ ಪ್ರಮುಖ ಸಾಂಸ್ಕೃತಿಕ ಸಂಕೇತವಾಗಿತ್ತು. ಆದರೆ ಇದು ಹಮಾಸ್‌ನ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ಪ್ರಯೋಗಾಲಯ ಎಂದು ಇಸ್ರೇಲ್ ಆಪಾದಿಸಿದೆ.

ವೆಬ್ದುನಿಯಾವನ್ನು ಓದಿ