ಗುಡ್ ಫ್ರೈಡೆ ರಜೆಗೆ ಅಸ್ತು: ಪೋಪ್ ಮನವಿಗೆ ಕ್ಯೂಬಾ ಮನ್ನಣೆ

ಸೋಮವಾರ, 2 ಏಪ್ರಿಲ್ 2012 (20:21 IST)
1959ರಲ್ಲಿನ ಕ್ರಾಂತಿಯ ನಂತರ ಕ್ಯೂಬಾ ಮೊದಲ ಬಾರಿಗೆ ಪೋಪ್ ಬೆನೆಡಿಕ್ಟ್ XVI ಅವರ ಮನವಿ ಮೇರೆಗೆ ಮುಂದಿನ ವಾರದ ಗುಡ್ ಫ್ರೈಡೆಯನ್ನು ರಜೆ ದಿನವಾಗಿ ಘೋಷಿಸಲು ಒಪ್ಪಿಗೆ ಸೂಚಿಸಿದೆ.

ಕ್ಯೂಬಾಕ್ಕೆ ಸೌಹಾರ್ದ ಭೇಟಿ ನೀಡಿದ ಸಂದರ್ಭದಲ್ಲಿ ಪೋಪ್ ಬೆನಡಿಕ್ಟ್ XVI ಅವರು ಗುಡ್ ಫ್ರೈಡೆಯಂದು ರಜೆ ಘೋಷಿಸಲು ಮನವಿ ಮಾಡಿಕೊಂಡಿದ್ದರು. ಆ ನಿಟ್ಟಿನಲ್ಲಿ ಅವರ ಮನವಿ ಪುರಸ್ಕರಿಸಿರುವುದಾಗಿ ಕ್ಯೂಬಾ ಕಮ್ಯುನಿಷ್ಟ್ ಸರ್ಕಾರ ತಿಳಿಸಿದೆ.

ಆದರೆ ಗುಡ್ ಫ್ರೈಡೆ ರಜೆಯನ್ನು ಖಾಯಂ ಆಗಿ ಮಾಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಕ್ಯೂಬಾ ಸುಪ್ರೀಂ ಆಡಳಿತ ಮಂಡಳಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದೆ.

ವೆಬ್ದುನಿಯಾವನ್ನು ಓದಿ