ಚಿಕ್ಕಪ್ಪನನ್ನು 120 ಹಸಿದ ನಾಯಿಗಳಿಗೆ ಆಹಾರವಾಗಿ ನೀಡಿದ ಕಿಮ್ ಜಾಂಗ್

ಶನಿವಾರ, 4 ಜನವರಿ 2014 (16:38 IST)
PR
PR
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಅನ್ ಚಿಕ್ಕಪ್ಪನನ್ನು ಹಸಿದ ನಾಯಿಗಳ ಬಾಯಿಗೆ ಆಹಾರವಾಗಿ ಕೊಡಲಾಯಿತು ಎಂಬ ಆಘಾತಕಾರಿ ಸುದ್ದಿಯನ್ನು ಚೀನಾದ ಪತ್ರಿಕೆಯೊಂದು ಬಹಿರಂಗಮಾಡಿದೆ.ಕಿಮ್ ಅವರ ಚಿಕ್ಕಪ್ಪ ಜಾಂಗ್ ಸಾಂಗ್ ತೇಕ್ ಅವರನ್ನು ಬೆತ್ತಲೆಗೊಳಿಸಿ 120 ಹಸಿದ ನಾಯಿಗಳ ಬೇಟೆಗೆ ಬಿಡಲಾಯಿತು. ಈ ನಾಯಿಗಳಿಗೆ ಮೂರು ದಿನಗಳಿಂದ ಆಹಾರ ಕೊಡದೇ ತೀವ್ರ ಹಸಿವಿನಿಂದ ಕೂಡಿದ್ದವು. ಕಳೆದ ವಾರ ಚಿಕ್ಕಪ್ಪನ ಮರಣದಂಡನೆ ಸುದ್ದಿ ಜಗತ್ತನ್ನೇ ಆಘಾತಗೊಳಿಸಿತ್ತು.

ಆದರೆ ಉತ್ತರಕೊರಿಯಾದ ಎರಡನೇ ಅತ್ಯಂತ ಪ್ರಬಲ ವ್ಯಕ್ತಿಯನ್ನು ಹತ್ಯೆ ಮಾಡಿದ ರೀತಿ ಇಡೀ ಜಗತ್ತನ್ನೇ ಬೆರಗುಗೊಳಿಸಿದೆ. ಸಾಂಗ್ ಥಾಕ್ ನಾಯಿಗಿಂತ ಕೆಟ್ಟ ವ್ಯಕ್ತಿ ಎಂದು ಹೇಳಿ ಉತ್ತರ ಕೊರಿಯಾ ಅವರ ಮರಣದಂಡನೆಯನ್ನು ಸಮರ್ಥಿಸಿಕೊಂಡಿತ್ತು.ಅವರು ದೇಶಕ್ಕೆ ಹಾನಿ ಮಾಡಲು ಪಿತೂರಿ ಹೂಡಿದ್ದರೆಂದು ಆರೋಪ ಹೊರಿಸಲಾಗಿತ್ತು.

ವೆಬ್ದುನಿಯಾವನ್ನು ಓದಿ