ಚೀನಾ ಅಮೆರಿಕ ಸಮುದ್ರೋತ್ಪನ್ನ ನಿಷೇದ

ಇಳಯರಾಜ

ಶನಿವಾರ, 30 ಜೂನ್ 2007 (14:43 IST)
ಚೀನಾ ಮೂಲದ ಸಮುದ್ರೋತ್ಪನ್ನಗಳ ಆಮದಿನ ಮೇಲೆ ಹೇರಿರುವ ನಿಷೇದವನ್ನು ತಕ್ಷಣ ತೆರವುಗೊಳಿಸಬೇಕೆಂದು ಅಮೆರಿಕವನ್ನು ಚೀನಾ ಒತ್ತಾಯಿಸಿದೆ.

ಚೀನಾದಿಂದ ಅಮೆರಿಕಕ್ಕೆ ರಪ್ತಾಗುತ್ತಿರುವ ನಾಲ್ಕು ವಿದಧ ಸಮುದ್ರ ಆಹಾರೋತ್ಪನ್ನಗಳ ಮೇಲೆ ಅಮೆರಿಕ ನಿಷೇಧ ವಿಧಿಸಿದ್ದು, ಸರಿಯಾದ ರೀತಿಯಲ್ಲಿ ಸಮಸ್ಯೆ ಪರಿಹಾರಕ್ಕೆ ಅಮೆರಿಕ ಮುಂದಾಗಬೇಕೆಂದು ತನ್ನ ಪ್ರತಿಭಟನೆಯಲ್ಲಿ ಹೇಳಿದೆ.

ಅಮೆರಿಕ ತೋರುತ್ತಿರುವ ತಾರತಮ್ಯ ದೋರಣೆಯನ್ನು ಚೀನಾ ಒಪ್ಪಿಕೊಳ್ಳುವುದಿಲ್ಲ ಎಂದು ಗುಣಮಟ್ಟ ನಿಯಂತ್ರಣಾಧಿಕಾರಿ, ಲಿ ಚಿಂಗಿಯಾಂಗ್ ಹೇಳಿದ್ದಾರೆ.

ಅಮೆರಿಕದಿಂದ ರಪ್ತಾಗುತ್ತಿರುವ ಕೆಲ ಆಹಾರೋತ್ಪನ್ನಗಳು ಕಳಪೆ ಗುಣಮಟ್ಟದಾಗಿವೆ ಎಂದು ಹೇಳಿರುವ ಅವರು, ಇಂತಹ ಸಮಸ್ಯೆಗಳನ್ನು ಸೂಕ್ತ ರೀತಿಯಲ್ಲಿ ಪರಿಹರಿಸುವ ಪ್ರಯತ್ನವನ್ನು ಚೀನಾ ಮಾಡುತ್ತದೆ ವಿನಃ ನಿಷೇದ ವಿಧಿಸುವಂತಹ ಕಠಿಣ ಕ್ರಮಗಳಿಗೆ ಮುಂದಾಗುವುದಿಲ್ಲ.

ಚೀನಾದಿಂದ ರಪ್ತಾಗಿರುವ ಕೆಲ ಸಮುದ್ರ ಉತ್ಪನ್ನಗಳಲ್ಲಿ ಲೋಪದೋಷಗಳು ಇರಬಹುದು ಎಂದು ಒಪ್ಪಿಕೊಂಡ ಅವರು,ಎಲ್ಲ ಆಮದುಗಳನ್ನು ನಿಷೇದಕ್ಕೆ ಒಳಪಡಿಸುವುದು ಸರಿಯಾದ ಕ್ರಮವಾಗಲಾರದು ಎಂದು ಹೇಳಿದ್ದಾರೆ.

ಅಮೆರಿಕದ ಆಹಾರ ಮತ್ತು ಔಷದ ಆಡಳಿತ ವಿಭಾಗವು ಚೀನಾದಿಂದ ಆಮದುಗೊಳ್ಳುತ್ತಿರುವ ಕ್ಯಾಟ್ ಫಿಶ್, ಬಸಾ ಮತ್ತು ಡಾಸ್ ಜಾತಿಯ ಮೀನುಗಳು ಮತ್ತು ಸಿಗಡಿ, ಹಾವು ಮೀನುಗಳನ್ನು ನಿಷೇಧಿಸಿದೆ.

ವೆಬ್ದುನಿಯಾವನ್ನು ಓದಿ