ಚೀನಾ: ಐಪ್ಯಾಡ್ 2 ಖರೀದಿಗಾಗಿ ಕಿಡ್ನಿ ಮಾರಿದ ಬಾಲಕ

ಭಾನುವಾರ, 26 ಜನವರಿ 2014 (12:22 IST)
PR
ಒಬ್ಬೊಬ್ಬರಿಗೆ ಒಂದೊಂದು ರೀತಿ ತೆವಲು...ಅದೇ ರೀತಿ ಚೀನಾದ ಅನ್‌ಹುಯೈ ಪ್ರಾಂತ್ಯದ ಅಪ್ರಾಪ್ತ ಬಾಲಕನೊಬ್ಬ ಐಪ್ಯಾಡ್ 2 ಖರೀದಿಗಾಗಿ ತನ್ನ ಬಲಭಾಗದ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ನಡೆದಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.

17ರ ಹರೆಯದ ಕ್ಸಿಯೊ ಝೆಂಗ್‌ಗೆ ನೂತನ ಐಪ್ಯಾಡ್ 2 ತೆಗೆದುಕೊಳ್ಳಬೇಕೆಂಬ ಹಠಕ್ಕೆ ಬಿದ್ದಿದ್ದ. ಆದರೆ ಅದನ್ನ ಖರೀದಿಸಲು ಆತನಲ್ಲಿ ಅಷ್ಟೊಂದು ಹಣ ಇರಲಿಲ್ಲವಾಗಿತ್ತು.

ಆಗ ಅವನಿಗೆ ಕಿಡ್ನಿ ಮಾರಾಟದ ಉಪಾಯ ಹೊಳೆದಿತ್ತು. ಆಗ ಝೆಂಗ್ ಆತನ ಕಿಡ್ನಿ ಮಾರಾಟಕ್ಕಾಗಿ ಏಜೆಂಟ್‌ನನ್ನ ಪತ್ತೆ ಹಚ್ಚಿದ್ದ. ನಂತರ ಆತ ಸೆಂಟ್ರಲ್ ಚೀನಾದಲ್ಲಿರುವ ಹುವಾನ್ ಪ್ರಾಂತ್ಯದಲ್ಲಿರುವ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ, ಕಿಡ್ನಿಯನ್ನು ಮಾರಾಟ ಮಾಡಿದ್ದ. ಕಿಡ್ನಿ ಪಡೆದ ವ್ಯಕ್ತಿ ಆತನಿಗೆ 22 ಸಾವಿರ ಯೆನ್ (3,900 ಡಾಲರ್) ಪಾವತಿ ಮಾಡಿರುವುದಾಗಿ ವರದಿ ವಿವರಿಸಿದೆ.

ಆ ಬಳಿಕ ಝೆಂಗ್ ನೂತನ ಐಪ್ಯಾಡ್2 ಮತ್ತು ಐಫೋನ್ ಖರೀದಿಸಿ ಮನೆಗೆ ವಾಪಸಾಗಿದ್ದ. ನಮ್ಮಲ್ಲಿ ನಿಜಕ್ಕೂ ಅಷ್ಟೊಂದು ಪ್ರಮಾಣದ ಹಣ ಇಲ್ಲವಾಗಿತ್ತು. ಆದರೆ ಆತ ಇದನ್ನೆಲ್ಲಾ ಹೇಗೆ ಖರೀದಿಸಿ ತಂದಿದ್ದಾನೆ ಎಂಬುದು ನಮಗೆ ಆಶ್ಚರ್ಯವಾಗಿತ್ತು ಎಂದು ಆತನ ತಾಯಿ ತಿಳಿಸಿದ್ದರು. ನಂತರ ಈ ಬಗ್ಗೆ ಮಗನಲ್ಲಿ ಪಟ್ಟುಹಿಡಿದು ಕೇಳಿದಾಗ, ಕಿಡ್ನಿ ಮಾರಾಟ ಮಾಡಿರುವ ವಿಷಯ ಬಾಯ್ಬಿಟ್ಟಿರುವುದಾಗಿ ವರದಿ ತಿಳಿಸಿದೆ.

ಈ ವಿಷಯ ತಿಳಿದ ತಾಯಿ ತನ್ನ ಮಗನನ್ನು ಕರೆದುಕೊಂಡು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಆಸ್ಪತ್ರೆಗೆ ಬಂದಿದ್ದರು. ಅಲ್ಲಿ ಮಗನ ಕಿಡ್ನಿ ಖರೀದಿಸಿದ ವ್ಯಕ್ತಿಯ ಮಾಹಿತಿ ಕಲೆ ಹಾಕಿದ್ದರು. ಆದರೆ ಆ ಏಜೆಂಟ್ ಮತ್ತು ಕಿಡ್ನಿ ಖರೀದಿಸಿದ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದೀಗ ತನ್ನ ಮಗನ ಕಿಡ್ನಿಯನ್ನು ಖರೀದಿಸಿರುವ ವ್ಯಕ್ತಿಯ ಶೋಧದಲ್ಲಿ ತೊಡಗಿದ್ದಾರೆಂದು ವರದಿ ಹೇಳಿದೆ.

ವೆಬ್ದುನಿಯಾವನ್ನು ಓದಿ