ಚೀನಾ ಗಡಿಯಲ್ಲಿ ಅಮೇರಿಕಾ ವಿಮಾನಗಳ ಗಸ್ತು : ಯಾವ ಕ್ಷಣದಲ್ಲಿ ಏನಾಗುತ್ತೊ ಗೊತ್ತಿಲ್ಲ.

ಬುಧವಾರ, 27 ನವೆಂಬರ್ 2013 (17:26 IST)
PTI
PTI
ಚೀನಾದ ಗಡಿ ಭಾಗದಲ್ಲಿ ಅಮೇರಿಕಾ ಸೇನಾ ಪಡೆಯ ವಿಮಾನಗಳು ಗಸ್ತು ತಿರುಗುತ್ತಿವೆ. ಯಾವ ಕ್ಷಣದಲ್ಲಿ ಏನಾಗುತ್ತೋ ಗೊತ್ತಿಲ್ಲ ಎನ್ನುವಂತಹ ಪರಿಸ್ತಿತಿ ಇದೀಗ ಚೀನಾದ ಗಡಿ ಭಾಗದಲ್ಲಿ ಉದ್ಬವವಾಗಿದೆ. ಜಪಾನ್ ಮತ್ತು ಚೀನಾ ನಡುವೆ ಗಡಿ ಭಾಗಕ್ಕೆ ಸಂಬಂದಿಸಿದಂತೆ ಮೈಮನಸ್ಸು ಉಂಟಾಗಿದೆ. ಹೀಗಾಗಿ ಜಪಾನ್ ಪರವಾಗಿ ನಿಂತಿರುವ ಅಮೇರಿಕಾ ಚೀನಾದ ಗಡಿ ಭಾಗದಲ್ಲಿ ಓಡಾಡುವುದರ ಮೂಲಕ ಚೀನಾಗೆ ಬಿಸಿ ಮುಟ್ಟಿಸುವ ಪ್ರಯತ್ನ ಮಾಡಿದೆ. ಅಮೇರಿಕಾದ ಈ ಉದ್ಧಟನದಿಂದ ಇತ್ತ ಚೀನಾ ಕೂಡ ಕೆರಳಿದೆ.

ಸಮುದ್ರದ ಗಡಿ ಭಾಗವನ್ನು ಹೊಂದಿರುವ ಚೀನಾದ ಪೂರ್ವ ಭಾಗ ಮತ್ತು ಜಪಾನ್ ಗಡಿ ಭಾಗದಲ್ಲಿ ಇದೀಗ ವಿವಾದ ಉದ್ಭವಿಸಿದೆ. ಸಾಗರ ಪ್ರದೇಶ ನಮಗೆ ಸೇರಬೇಕು ಅಂತ ಒಂದೆಡೆ ಚೀನಾ ಪಟ್ಟು ಹಿಡಿದಿದ್ರೆ, ಅದು ನನ್ನ ಸ್ವತ್ತು ಅಂತ ಚೀನಾ ದೇಶಕ್ಕೆ ಜಪಾನ್‌ ಸಡ್ಡು ಹೊಡೆದಿದೆ. ಈ ಕದನ ಇದೀಗ ಅಮೇರಿಕಾದ ಕದ ತಟ್ಟಿದ್ದು, ಜಪಾನ್ ಬೆಂಬಲಿಸಿದ ಅಮೇರಿಕಾ ಬಾಂಬರ್‌ ವಿಮಾನಗಳು ಚೀನಾ ಗಡಿ ಭಾಗದಲ್ಲಿ ಗಸ್ತು ತಿರುಗುತ್ತಿವೆ.

ಅಮೇರಿಕಾದ B-52 ವಿಮಾನಗಳು ಪೂರ್ವ ಚೀನಾದ ಐಸ್ಲೆಂಡ್ ಪ್ರದೇಶಗಳಲ್ಲಿ ಗಸ್ತು ತಿರುಗುತ್ತಿರುಗುವುದನ್ನು ಚೀನಾದ ಸೇನಾಪಡೆ ಪತ್ತೆ ಹಚ್ಚಿವೆ. ಅನುಮತಿ ಪಡೆಯದೇ ಅಮೇರಿಕಾ ಸೇನಾಪಡೆಗಳ ವಿಮಾನಗಳು ಚೀನಾದ ಗಡಿ ಭಗದಲ್ಲಿ ಗಸ್ತು ತಿರುಗುತ್ತಿರುವುದರಿಂದ ಚೀನಾ ಕೆರಳಿ ಕೆಂಡಾಮಂಡಲವಾಗಿದೆ.

ಚೀನಾ ದೇಶಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ..? ಇನ್ನಷ್ಟು ಮಾಹಿತಿ ಮುಂದಿನ ಪುಟದಲ್ಲಿ....

PTI
PTI
ಚೀನಾ ದೇಶಕ್ಕೆ ಸೇರಬೇಕು ಎಂದು ಹೇಳುತ್ತಿರುವ ಗಡಿ ಭಾಗ ಜಪಾನ್‌ ದೇಶಕ್ಕೆ ಸೇರಿದ್ದು ಎಂದು ಅಮೇರಿಕಾ ಕೂಡ ಹೇಳುತ್ತಿದೆ. ಹೀಗಾಗಿ ಚೀನಾ ಉದ್ಧಟತನ ತೋರಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ ಅಂತ ಚೀನಾಗೆ ಅಮೇರಿಕಾ ಸಂದೇಶ ರವಾನಿಸಿದೆ.

ಸದ್ಯಕ್ಕೆ ಗಡಿ ಭಾಗದಲ್ಲಿ ಇದೀಗ ಉದ್ವಿಗ್ನ ಪರಿಸ್ತಿತಿ ನಿರ್ಮಾಣವಾಗಿದ್ದು, ಶಾಂತ ರೀತಿಯಲ್ಲಿ ಪರಿಸ್ತಿತಿಯನ್ನು ನಿಭಾಯಿಸಿಕೊಳ್ಳಬೇಕಾದ ಅಗತ್ಯತೆ ಇದೆ. ಇಲ್ಲವಾದಲ್ಲಿ ಅಪಾಯ ಹೆಚ್ಚಲಿದೆ ಅನ್ನೋದು ಆರ್ಥಿಕ ತಜ್ಞರ ಅಂಬೋಣ

ವೆಬ್ದುನಿಯಾವನ್ನು ಓದಿ