ಚೀನಾ: ಭಾರೀ ಭೂ ಕುಸಿತಕ್ಕೆ 18 ವಿದ್ಯಾರ್ಥಿಗಳು ಸಮಾಧಿ

PR
ಚೀನಾದ ನೈರುತ್ಯ ಪ್ರದೇಶದಲ್ಲಿನ ಪ್ರಾಥಮಿಕ ಶಾಲಾ ಕಟ್ಟಡ ಭೂ ಕುಸಿತಕ್ಕೆ ಸಿಲುಕಿ ಸುಮಾರು 18 ವಿದ್ಯಾರ್ಥಿಗಳು ಸಮಾಧಿಯಾಗಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.

ಗುರುವಾರ ಬೆಳಿಗ್ಗೆ ಯುನ್ನಾನ್ ಪ್ರಾಂತ್ಯದ ಯಿಲಿಯಾಂಗ್ ಕೌಂಟಿಯ ಹಳ್ಳಿಯೊಂದರಲ್ಲಿ ಈ ದುರಂತ ಸಂಭವಿಸಿರುವುದಾಗಿ ಚೀನಾ ಸರ್ಕಾರ ಹೇಳಿದೆ.

ಯಿಲಿಯಾಂಗ್ ಸರ್ಕಾರದ ವೆಬ್ ಸೈಟ್ ಮಾಹಿತಿ ಪ್ರಕಾರ, ಭೂಕುಸಿತದಲ್ಲಿ ಶಾಲೆ ಸಂಪೂರ್ಣವಾಗಿ ಧ್ವಂಸಗೊಂಡಿದ್ದು, 18 ಮಕ್ಕಳು ಸಮಾಧಿಯಾಗಿದ್ದಾರೆ. ಅಲ್ಲದೇ ಕೆಲವು ಮನೆಗಳು ಧ್ವಂಸಗೊಡಿದ್ದು, ವ್ಯಕ್ತಿಯೊಬ್ಬನನ್ನು ಅಪಾಯದಿಂದ ರಕ್ಷಿಸಲಾಗಿದೆ ಎಂದು ವಿವರಿಸಿದೆ.

ಸುರಕ್ಷತೆಯ ದೃಷ್ಟಿಯಿಂದ ಸ್ಥಳೀಯ ನಿವಾಸಿಗಳನ್ನು ಬೇರೆ ಸ್ಥಳಕ್ಕೆ ರವಾನಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವರು ತಿಳಿಸಿರುವುದಾಗಿ ವರದಿ ಹೇಳಿದೆ.

ವೆಬ್ದುನಿಯಾವನ್ನು ಓದಿ