ಛೇ...ಭಾರತದ ಮೇಲೆ ನಮಗೆ ಕೋಪ ಇಲ್ಲ: ಶ್ರೀಲಂಕಾ ನುಡಿ

ಶುಕ್ರವಾರ, 6 ಏಪ್ರಿಲ್ 2012 (13:39 IST)
PR
ಯುಎನ್‌ಎಚ್‌ಆರ್‌ಸಿಯಲ್ಲಿ ಅಮೆರಿಕ ಮಂಡಿಸಲಿರುವ ಶ್ರೀಲಂಕಾ ವಿರುದ್ಧದ ನಿರ್ಣಯಕ್ಕೆ ಭಾರತ ಬೆಂಬಲ ವ್ಯಕ್ತಪಡಿಸಲು ನಿರ್ಧರಿಸಿದ್ದರೂ ಇದರಿಂದ ಭಾರತ ಮತ್ತು ಶ್ರೀಲಂಕಾ ನಡುವಿನ ಬಾಂಧವ್ಯಕ್ಕೆ ಯಾವುದೇ ಧಕ್ಕೆಯಾಗದು ಎಂದು ಶ್ರೀಲಂಕಾದ ವಿದೇಶಾಂಗ ಸಚಿವ ಜಿ.ಎಲ್‌.ಪೆರಿಸ್‌ ವಿಶ್ವಾಸವ್ಯಕ್ತಪಡಿಸಿದ್ದಾರೆ.

ಉಭಯ ರಾಷ್ಟ್ರಗಳ ನಡುವಿನ ಉತ್ತಮ ಬಾಂಧವ್ಯಕ್ಕೆ ಇದರಿಂದ ಯಾವುದೇ ತೊಂದರೆಯಾಗದು ಎಂದು ಈ ಸಂದರ್ಭದಲ್ಲಿ ಹೇಳಿದರು.

ಗುರುವಾರ ರಾತ್ರಿ ಪಾರ್ಲಿಮೆಂಟನ್ನು ಉದ್ದೇಶಿಸಿ ಮಾತನಾಡಿದ ಸಚಿವರು ಆ ಬಗ್ಗೆ ನಮಗೆ ಭಾರತದ ಮೇಲೆ ಸಿಟ್ಟಾಗಲಿ, ಸಿಡುಕಾಗಲಿ ಇಲ್ಲ ಎಂದರು. ಉಭಯ ರಾಷ್ಟ್ರಗಳ ಸಂಬಂಧವನ್ನು ನಾವು ಈ ಹಿನ್ನೆಲೆಯಲ್ಲಿ ನೋಡಬಾರದು ಎಂದೂ ಅವರು ಸ್ಪಷ್ಟಪಡಿಸಿದರು.

ದೇಶದಲ್ಲಿ ಶಾಶ್ವತವಾಗಿ ಶಾಂತಿ ಸ್ಥಾಪಿಸುವ ಬಗ್ಗೆ, ಉಗ್ರರನ್ನು ಹತೋಟಿಯಲ್ಲಿಡುವ ಬಗ್ಗೆ ನಮಗೆ ಬೇರೆಯವರ(ಭಾರತ) ಉಪದೇಶ ಬೇಕಾಗಿಲ್ಲ ಎಂದು ಇತ್ತೀಚೆಗಷ್ಟೇ ಲಂಕಾ ಅಧ್ಯಕ್ಷ ಮಹೀಂದಾ ರಾಜಪಕ್ಸೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು.

ವೆಬ್ದುನಿಯಾವನ್ನು ಓದಿ