ಜಪಾನ್‌ ಪರಮಾಣು ಸೋರಿಕೆಗೆ 'ಅಸಡ್ಡೆ' ಕಾರಣ

ಶುಕ್ರವಾರ, 23 ಆಗಸ್ಟ್ 2013 (16:17 IST)
PTI
PTI
ಜಪಾನಿನ ಫುಕುಶಿಮಾ ನ್ಯೂಕ್ಲಿಯರ್‌ ಪ್ಲಾಂಟ್‌ನಲ್ಲಿನ ಪರಮಾಣು ಸೋರಿಕೆಗೆ ಪರಿವೀಕ್ಷಕರ ಅಸಡ್ಡೆಯೇ ಪ್ರಮುಖ ಕಾರಣ ಎಂದು ಮೂಲಗಳು ತಿಳಿಸಿವೆ. ಪರಿವೀಕ್ಷಕರ ನಿರ್ಲಕ್ಷತೆಯೇ ವಿಕಿರಣ ಸೋರಿಕೆ ಹೆಚ್ಚಾಗಲು ಕಾರಣ ಎಂಬುದು ಜಪಾನ್ ಸುದ್ದಿ ಮೂಲಗಳು ವರದಿ ಮಾಡಿವೆ.

ಫುಕುಶಿಮಾ ನ್ಯೂಕ್ಲಿಯರ್‌ ಪ್ಲಾಂಟ್‌ನಲ್ಲಿ ವಿಕಿರಣ ಸೋರಿಕೆಯಾಗುತ್ತಿದ್ದಂತೆ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಅಲ್ಪಮಟ್ಟಿನ ಸೋರಿಕೆ ಕಂಡಾಗಲೇ ಎಚ್ಚರಿಕೆ ವಹಿಸಬೇಕಿತ್ತು. ಪರಿವೀಕ್ಷಕರು ಅಸಡ್ಡೆ ತೋರಿಸಿದ್ದರಿಂದ ಇದೀಗ ಈ ಸೋರಿಕೆ ಇನ್ನಷ್ಟು ಹೆಚ್ಚಾಗಿದೆ ಎಂದು ತಜ್ಞರ ತಂಡ ಹೇಳಿದೆ.

ಎರಡು ವರ್ಷಗಳ ಹಿಂದೆ ಸಂಭವಿಸಿದ ಸುನಾಮಿಯಿಂದಾಗಿ ಫುಕುಶಿಮಾ ಅಣುಸ್ಥಾವರಕ್ಕೆ ಹಾನಿಯುಂಟಾಗಿತ್ತು. ಆದರೆ ಅದನ್ನು ಸೂಕ್ಷ್ಮವಾಗಿ ಪರಿಗಣಿಸದ ತಜ್ಞರು ಸುಮ್ಮನಾಗಿಬಿಟ್ಟಿದ್ದರು. ಆದರೆ ನಂತರದಲ್ಲಿ ವಿಕಿರಣ ಸೋರಿಕೆ ಉಂಟಾಗಲು ಪ್ರಾರಂಭಿಸಿತು. ಇದೀಗ 300 ಟನ್‌ಗಳಷ್ಟು ವಿಷಕಾರಿ ವಿಕಿರಣ ಸೋರಿಕೆಯಾಗಿದೆ. ಇದು ಅತ್ಯಂತ ಅಪಾಯಕಾರಿ ವಿಕಿರಣವಾಗಿದ್ದು, ಜನರ ಮೇಲೆ ಗಾಢವಾದ ಮತ್ತು ವ್ಯತಿರಿಕ್ತ ಪ್ರಮಾಣದಲ್ಲಿ ಪ್ರಭಾವ ಬೀರುತ್ತದೆ.

ವೆಬ್ದುನಿಯಾವನ್ನು ಓದಿ