ಜಪಾನ್ ಕರಾವಳಿಯಲ್ಲಿ ಅಣುವಿಕಿರಣದ ಹೆಚ್ಚಳ-ಜೀವಜಗತ್ತಿಗೆ ಮಾರಕ

ಬುಧವಾರ, 22 ಫೆಬ್ರವರಿ 2012 (11:38 IST)
ಜಪಾನಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಾನಿಗೊಳಗಾಗಿರುವ ಫುಕುಶಿಮಾ ಅಣುವಿದ್ಯುತ್ ಸ್ಥಾವರದಿಂದ ಸೋರಿಕೆಯಾಗಿರುವ ಅಣುವಿಕಿರಣವು ಜಪಾನಿನ ಫೆಸಿಫಿಕ್ ಸಾಗರದ ಕರಾವಳಿ ತೀರದಲ್ಲಿ ಪತ್ತೆಯಾಗಿದೆ. ತೀರಪ್ರದೇಶದಿಂದ ಅಣುಸ್ಥಾವರವು 643 ಕಿ.ಮೀ. ದೂರದಲ್ಲಿದೆ. ಆದರೆ ನೀರಿನಲ್ಲಿರುವ ರೇಡಿಯೇಷನ್ ಪ್ರಮಾಣವು ಮೊದಲಿಗಿಂತ 1000 ಪಟ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ.

ಈ ಮಟ್ಟದ ಅಣುವಿಕಿರಣ ಸೋರಿಕೆಯು ಸಾಮಾನ್ಯವಾಗಿ ಜೀವಜಗತ್ತಿಗೆ ಇಲ್ಲವೇ ಸಮುದ್ರದಲ್ಲಿರುವ ಜಲಚರಗಳಿಗೆ ತುಂಬಾ ಮಾರಕವೆಂದು ವುಡ್ಸ್ ಹೋಲ್ ಓಶಿಯಾನೋಗ್ರಾಫಿಕ್ ಸಂಸ್ಥೆಯ ಸಾಗರ ವಿಜ್ಞಾನಿ ಕೆನ್ ಬ್ಯೂಸ್ಸೆಲೆರ್ ತಿಳಿಸಿರುವರು.

ಅಣು ಸ್ಥಾವರದ ಸೋರಿಕೆ ಆರಂಭವಾದ ಮೂರು ತಿಂಗಳ ನಂತರ ಪರೀಕ್ಷೆಗಾಗಿ ಕಳೆದ ಜೂನ್ ತಿಂಗಳಿನಲ್ಲಿ ನೀರಿನ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅಂತೆಯೇ ಅಲ್ಲಿಂದ ಇಲ್ಲಿಯ ತನಕ ಸಾವಿರಾರು ನೀರಿನ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದರು.

ವೆಬ್ದುನಿಯಾವನ್ನು ಓದಿ