ಟಿವಿಯನ್ನು 87 ಗಂಟೆ ವೀಕ್ಷಿಸಿದ ಮೂವರಿಂದ ಗಿನ್ನಿಸ್ ದಾಖಲೆ

ಗುರುವಾರ, 23 ಜನವರಿ 2014 (19:47 IST)
PR
PR
ವಾಷಿಂಗ್ಟನ್: ಟೆಲಿವಿಷನ್‌ನನ್ನು ನಿರಂತರವಾಗಿ ಐದು ದಿನಗಳ ಕಾಲ 87 ಗಂಟೆಗಳ ಕಾಲ ವೀಕ್ಷಣೆ ಮಾಡುವ ಮೂಲಕ ಅಮೆರಿಕದ ಮೂವರು ವ್ಯಕ್ತಿಗಳು ಹೊಸ ಗಿನ್ನಿಸ್ ದಾಖಲೆ ಸ್ಥಾಪಿಸಿದ್ದಾರೆ. ಡ್ಯಾನ್ ಜಾರ್ಡಾನ್, ಸ್ಪೆನ್ಸರ್ ಲಾರ್ಸನ್ ಮತ್ತು ಕ್ರಿಸ್ ಲಾಫ್‌ಲಿನ್ TiVo ಬೂತ್‌ನಲ್ಲಿ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಷೋ ಸಂದರ್ಭದಲ್ಲಿ ನೆವಾಡಾದ ಲಾಸ್ ವೆಗಾಸ್ ಸಮಾವೇಶದಲ್ಲಿ ಈ ದಾಖಲೆ ಮಾಡಿದ್ದಾರೆ.ಗಿನ್ನಿಸ್ ನಿಯಮಗಳ ಪ್ರಕಾರ ಅವರಿಗೆ ಪ್ರತಿ ಒಂದು ಗಂಟೆಗೆ ಐದು ನಿಮಿಷಗಳ ವಿರಾಮ ನೀಡಿ ಬಾತ್‌ರೂಂ ಬಳಕೆ ಅಥವಾ ನಿದ್ರೆಗೆ ಅವಕಾಶ ನೀಡಲಾಗಿತ್ತು.

ಸ್ಪರ್ಧಿಗಳಿಗೆ ನಿಯಮಿತ ವೈದ್ಯಕೀಯ ಪರೀಕ್ಷೆ ಮತ್ತು ಚಾನೆಲ್ ಬದಲಾವಣೆಗೆ ಮತ್ತು ವೀಕ್ಷಣೆ ಸಂದರ್ಭದಲ್ಲಿ ಆಹಾರ, ಪಾನೀಯ ಸೇವನೆಗೆ ಅವಕಾಶ ನೀಡಲಾಗಿತ್ತು. ಆದರೆ ಬ್ರೇಕ್ ಹೊರತಾಗಿ ಓದುವುದಕ್ಕೆ ಅಥವಾ ಮಾತನಾಡುವುದಕ್ಕೆ ಅವಕಾಶವಿರಲಿಲ್ಲ.

ವೆಬ್ದುನಿಯಾವನ್ನು ಓದಿ