ಡೆನ್ಮಾರ್ಕ್‌ನಲ್ಲಿ ಬುರ್ಖಾ ಧಾರಣೆಗೆ ಅವಕಾಶವಿಲ್ಲ: ಪ್ರಧಾನಿ

ಬುಧವಾರ, 20 ಜನವರಿ 2010 (15:04 IST)
PTI
ಡೆನ್ಮಾರ್ಕ್‌ನಲ್ಲಿ ಮುಸ್ಲಿಂ ಮಹಿಳೆಯರು ಬುರ್ಖಾ ಹಾಗೂ ಮುಖಗವಸು ಉಪಯೋಗಿಸಲು ಅವಕಾಶ ಇಲ್ಲ ಎಂದು ಪ್ರಧಾನಿ ಲಾರ್ಸ್ ಲೊಯ್ಕೆ ರಾಸುಮುಸ್ಸೇನೆ ತಿಳಿಸಿದ್ದು, ಸರ್ಕಾರ ಇದನ್ನು ನಿರ್ಬಂಧಿಸಿರುವುದಾಗಿ ಹೇಳಿದ್ದಾರೆ.

ಡೆನ್ಮಾರ್ಕ್‌ನಲ್ಲಿ ಕೆಲವು ಮುಸ್ಲಿಂ ಮಹಿಳೆಯರು ಬುರ್ಖಾ ಹಾಗೂ ಮುಖಗವಸು ಹಾಕುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಈ ಹೇಳಿಕೆಯನ್ನು ನೀಡಿದ್ದಾರೆ. ಕಾನೂನು ಮತ್ತು ಇನ್ನಿತರ ಕಾರಣಗಳಿಂದಾಗಿ ಈ ನಿರ್ಬಂಧ ಹೇರಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಬುರ್ಖಾ ನಿಷೇಧದ ಕುರಿತಂತೆ ಸರ್ಕಾರದ ನಿಲುವು ದೃಢವಾಗಿದೆ ಎಂದಿರುವ ಪ್ರಧಾನಿ, ಡ್ಯಾನಿಶ್ ಸಮಾಜದಲ್ಲಿ ಬುರ್ಖಾ ಮತ್ತು ಮುಖಗವಸು ಧರಿಸಲು ಅವಕಾಶ ಇಲ್ಲ ಎಂದಿದ್ದಾರೆ.

ಮಹಿಳೆ ಮತ್ತು ಮಾನವೀಯತೆ ನೆಲೆಯಲ್ಲಿ ಬುರ್ಖಾ ಧಾರಣೆ ಧಾರ್ಮಿಕ ಸಂಕೇತ ಎಂಬುದನ್ನು ನಾವು ಸಂಪೂರ್ಣವಾಗಿ ವಿರೋಧಿಸುತ್ತೇವೆ ಮತ್ತು ನಾವು ಡ್ಯಾನಿಷ್ ಸಮಾಜದಲ್ಲಿ ನಾವು ಹೋರಾಟ ನಡೆಸಬೇಕಾಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಡೆನ್ಮಾರ್ಕ್ ಮುಕ್ತ ಸಮಾಜವಾಗಿದ್ದು, ಪ್ರಜಾಸತ್ತಾತ್ಮಕ ಸಮಾಜದಲ್ಲಿ ಒಬ್ಬ ವ್ಯಕ್ತಿ ಯಾರೊಂದಿಗೆ ಮಾತನಾಡುತ್ತಿದ್ದಾನೆ ಎಂಬುದು ನೋಡಿದಾಗ ತಿಳಿಯಬೇಕು. ಇದು ಕ್ಲಾಸ್ ರೂಮ್ ಆಗಿರಬಹುದು ಅಥವಾ ಕಾರ್ಯನಿರ್ವಹಿಸುವ ಸ್ಥಳದಲ್ಲಿಯೇ ಆಗಿರಬಹುದು ಎಂದು ವಿವರಿಸಿದ್ದಾರೆ.

ಫ್ರಾನ್ಸ್ ಕೂಡ ಬುರ್ಖಾ ಮೇಲೆ ನಿಷೇಧ ಹೇರಿತ್ತು. ಆ ನಿಟ್ಟಿನಲ್ಲಿ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಅವರನ್ನು ಶಿವಸೇನೆ ಅಭಿನಂದಿಸಿತ್ತು. ಅವರನ್ನು ನೋಡಿ ಭಾರತೀಯ ರಾಜಕಾರಣಿಗಳು ಕೂಡ ಪಾಠ ಕಲಿಯಬೇಕಿದೆ ಎಂದು ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಠಾಕ್ರೆ ಸಲಹೆ ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ವೆಬ್ದುನಿಯಾವನ್ನು ಓದಿ