ತೈಲಸಂಪತ್ತಿನ ಸೌದಿ ಜನರಿಗೆ ಸಂಬಳ ಸಾಲುತ್ತಿಲ್ಲವಂತೆ!

ಸೋಮವಾರ, 7 ಅಕ್ಟೋಬರ್ 2013 (16:16 IST)
PR
PR
ರಿಯಾದ್: ವಿಶ್ವದಲ್ಲೇ ಅತೀ ಹೆಚ್ಚು ತೈಲದ ಆದಾಯದ ಸಂಪತ್ತು ಗಳಿಸುತ್ತಿರುವ ಸೌದಿಗಳು ತಮ್ಮ ಜೀವನೋಪಾಯಕ್ಕೆ ಸಾಕಷ್ಟು ಸಂಬಳ ಸಿಗುತ್ತಿಲ್ಲವೆಂದು ದೂರಿದ್ದಾರೆ. ಈಗ ಅವರು ಹೆಚ್ಚಿನ ಸಂಬಳ ನೀಡುವಂತೆ ಬೇಡಿಕೆ ಸಲ್ಲಿಸಲು ಟ್ವಿಟರ್‌ಗೆ ಮೊರೆ ಹೋಗಿದ್ದಾರೆ.ನಮಗೆ ಸಂಬಳ ಸಾಕಾಗುವುದಿಲ್ಲ ಎಂದು ಮೈಕ್ರೋ ಬ್ಲಾಗಿಂಗ್ ವೆಬ್‌ಸೈಟ್‌ನಲ್ಲಿ ಆರಂಭಿಸಿದ ಹ್ಯಾ‌ಶ್‌ಟ್ಯಾಗ್‌ಗೆ ಪ್ರತಿಕ್ರಿಯೆಯಾಗಿ 17.5 ದಶಲಕ್ಷ ಟ್ವೀಟ್‌ಗಳನ್ನು ಪೋಸ್ಟ್ ಮಾಡಲಾಗಿದೆ. ಸಂಬಳ ಸಾಕಾಗದೇ ಖರೀದಿ ಶಕ್ತಿಯೇ ಕುಗ್ಗಿದೆ ಎಂದು ಸೌದಿಗಳು ಹತಾಶೆ ವ್ಯಕ್ತಪಡಿಸಿದ್ದಾರೆ.ಸರ್ಕಾರಿ ನೌಕರನ ಸಂಬಳ 3945 ರಿಯಾಲ್‌(1051 ಡಾಲರ್) ಮತ್ತು 24750 ರಿಯಾಲ್( 6599 ಡಾಲರ್) ನಡುವೆ ಇರುತ್ತದೆ.

ಇದರ ಜತೆ ವಿವಿಧ ಭತ್ಯೆಗಳು ಸಿಗುತ್ತವೆ.ಖಾಸಗಿ ಕ್ಷೇತ್ರದಲ್ಲಿ ಸರಾಸರಿ ಸಂಬಳ 6400 ರಿಯಾಲ್‌ಗಳು.(1700 ಡಾಲರ್). ಆದರೆ ಇತರೆ ಗಲ್ಫ್ ರಾಷ್ಟ್ರಗಳಲ್ಲಿ 15, 299 ರಿಯಾಲ್‌ಗಳಿವೆ(4000 ಡಾಲರ್) ಎಂದು ವಿಶ್ವ ಬ್ಯಾಂಕ್ ಮತ್ತು ಸೌದಿ ಆರ್ಥಿಕ ಸಚಿವಾಲಯ ಸಿದ್ದಪಡಿಸಿದ ವರದಿ ತಿಳಿಸಿದೆ.

PR
PR
ಅಧಿಕಾರಿಗಳು ಕದಿಯುವುದನ್ನು ನಿಲ್ಲಿಸಲಿ, ಭ್ರಷ್ಟಾಚಾರ ಎಲ್ಲೆಲ್ಲೂ ವ್ಯಾಪಿಸಿದ್ದು, ಜನರು ಬಲಿಪಶುಗಳಾಗಿದ್ದಾರೆ ಎಂದು ಪತ್ರಕರ್ತ ಫಹದ್ ಅಲ್ ಫಾಹಿದ್ ಟ್ವೀಟ್ ಮಾಡಿದ್ದಾರೆ. ಪೋಸ್ಟ್ ಮಾಡಿದ ಇನ್ನೂ ಕೆಲವು ಚಿತ್ರಗಳು ಪ್ರಭುತ್ವದಲ್ಲಿನ ದಯನೀಯ ಸ್ಥಿತಿಯನ್ನು ಬಿಂಬಿಸಿವೆ. ಮಹಿಳೆಯೊಬ್ಬಳು ಕಸದಲ್ಲಿ ಹುಡುಕುತ್ತಿರುವುದು, ಕುಟುಂಬಗಳು ಜೀರ್ಣಾವಸ್ಥೆಯ ಮನೆಗಳಲ್ಲಿ ವಾಸಿಸುವ ಚಿತ್ರಗಳನ್ನು ಪೋಸ್ಟ್ ಮಾಡಲಾಗಿದೆ.

ಪೋಸ್ಟ್ ಮಾಡಿದ ಕೆಲವು ಕಾರ್ಟೂನ್‌ಗಳ ಪೈಕಿ ಸೌದಿ ವ್ಯಕ್ತಿ ಪಾಲ್ಮ್ ಮರದ ನೆರಳಲ್ಲಿ ನಿಂತಿದ್ದರೆ, ಅದರ ಕೊಂಬೆಗಳು ಪ್ರಭುತ್ವದ ಗಡಿಯಾಚೆಯೂ ಚಾಚಿರುತ್ತದೆ.ಅದರಲ್ಲಿ ಕೊಟ್ಟಿರುವ ಶೀರ್ಷಿಕೆಯಲ್ಲಿ ನಮ್ಮ ಆಸ್ತಿಗಳು ಅನ್ಯರ ಪಾಲಾಗುತ್ತಿದೆ. ಪ್ರಭುತ್ವ ಶೇ. 5ರಷ್ಟು ಸಂಪತ್ತು ಪಡೆದರೆ, ಉಳಿದ ಶೇ. 95 ವಿದೇಶೀಯರ ಪಾಲಾಗುತ್ತದೆ ಎಂದು ತಿಳಿಸಲಾಗಿದೆ.

ವೆಬ್ದುನಿಯಾವನ್ನು ಓದಿ