ತೈಲ ಕೊಳವೆ ಸ್ಪೋಟ 60 ಕ್ಕೂ ಹೆಚ್ಚು ಸಾವು.

ಸೋಮವಾರ, 25 ನವೆಂಬರ್ 2013 (16:00 IST)
PR
PR
ತೈಲ ಸಾಗಾಣಿಕೆಯ ಕೊಳವೆಯಲ್ಲಿ ಕಾಣಿಸಿಕೊಂಡ ದೋಷದಿಂದಾಗಿ ತೈಲ ಕೊಳವೆ ಸ್ಪೋಟಗೊಂಡಿದೆ. ಪರಿಣಾಮವಾಗಿ 60 ಕ್ಕೂ ಹೆಚ್ಚು ದಾರುಣ ಸಾವು ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಇದು ಮಾನವ ನಿರ್ಮಿತ ದೋಷದಿಂದ ಉಂಟಾದ ಅವಘಡವಾಗಿದ್ದು, ಹಿಂದಿನ ಅವಘಡಗಳಲ್ಲಿಯೇ ಇದು ಅತ್ಯಂತ ಅಪಾಯಕಾರಿ ಅವಘಡ ಎಂದು ತಜ್ಞರು ಹೇಳಿದ್ದಾರೆ.

ಚೀನಾದ ದಕ್ಷಿಣ ಭಾಗದಲ್ಲಿ ಇರುವ ತೈಲೋತ್ಪನ್ನ ಕೇಂದ್ರ ಮೂರು ದಿನಗಳ ಹಿಂದೆ ಸ್ಪೋಟಗೊಂಡಿತ್ತು. ಪರಿಣಾಮವಾಗಿ 60ಕ್ಕೂ ಹೆಚ್ಚು ಜನರು ದಾರುಣವಾಗಿ ಸಾವಿಗೀಡಾಗಿದ್ದಾರೆ. ಅದರಲ್ಲಿ 55 ಜನರ ಮೃತ ದೇಹಗಳು ಪತ್ತೆಯಾಗಿದ್ದು, ಇನ್ನು 9 ಜನರು ಕಣ್ಮರೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ತೈಲ ಕೊಳವೆಯ ಸ್ಪೋಟದಿಂದಾಗಿ 136 ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ. ಇವರನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದ್ದು ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ತೈಲ ಕೊಳವೆಯಲ್ಲಿ ಸ್ವಲ್ಪ ಮಟ್ಟದ ಸೋರಿಕೆ ಕಾಣಿಸಿಕೊಂಡಿದ್ದರಿಂದ ಸ್ಪೋಟ ಸಂಭವಿಸಿದೆ ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ