ದಕ್ಷಿಣ ಕೊರಿಯಾದಲ್ಲಿ ಮುಳುಗಿದ ಹಡಗು: 270 ಪ್ರಯಾಣಿಕರ ಸುಳಿವಿಲ್ಲ

ಶುಕ್ರವಾರ, 18 ಏಪ್ರಿಲ್ 2014 (13:49 IST)
ದಕ್ಷಿಣ ಕೊರಿಯಾದ ನೈರುತ್ಯ ಭಾಗದ ಸಮುದ್ರದಲ್ಲಿ ಪ್ರಯಾಣಿಕರ ಹಡಗೊಂದು ಮುಳುಗಿದ್ದು, ಈವರೆಗೆ 25 ಮಂದಿ ದುರ್ಮರಣಕ್ಕೆ ಈಡಾದ ದಾರುಣ ಘಟನೆ ಸಂಭವಿಸಿದೆ. ಹಡಗಿನಲ್ಲಿ ಬಹುತೇಕ ಹೈಸ್ಕೂಲು ವಿದ್ಯಾರ್ಥಿಗಳೇ ತುಂಬಿದ್ದು, ರಜಾದಿನ ಕಳೆಯಲು ದ್ವೀಪವೊಂದಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಪ್ರಯಾಣಿಕರನ್ನು ರಕ್ಷಿಸಲು 2ನೇ ದಿನವೂ ಕೂಡ ರಕ್ಷಣಾ ಕಾರ್ಯ ಯುದ್ಧೋಪಾದಿಯಲ್ಲಿ ಮುಂದುವರಿದಿದೆ. ಸುಮಾರು 475 ಜನರು ಹಡಗಿನಲ್ಲಿ ಪ್ರಯಾಣಿಸುತ್ತಿದ್ದು, 270 ಪ್ರಯಾಣಿಕರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲವೆಂದು ಹೇಳಲಾಗಿದೆ.

PR
PR
ಹಡಗಿನೊಳಗೆ ನೀರು ತುಂಬಿರುವುದರಿಂದ ಕೆಲವು ಬಾಗಿಲುಗಳು ಲಾಕ್ ಆಗಿದ್ದು ಒಳಪ್ರವೇಶಿಸಲು ಸಾಧ್ಯವಾಗುತ್ತಿಲ್ಲವೆಂದು ಹೇಳಲಾಗುತ್ತಿದೆ. ರಕ್ಷಣಾ ಯೋಧರು ಹಡಗಿನ ಒಳಗೆ ಆಮ್ಲಜನಕ ಪೂರೈಕೆಗೆ ಯತ್ನಿಸಿದ್ದಾರೆ. ತುರ್ತು ರಕ್ಷಣಾ ತಂಡ ನೌಕೆಯೊಳಗೆ ಶೋಧಿಸಲು ಫ್ಲಡ್‌ಲೈಟ್‌ಗಳನ್ನು ಬಳಸುತ್ತಿದ್ದಾರೆ. ಹಡಗು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ್ದು ಸಣ್ಣ ಭಾಗ ಮಾತ್ರ ಹೊರಗೆ ಕಾಣುತ್ತಿದೆ. ಹಡಗಿನಲ್ಲಿ ಶಾಲಾಮಕ್ಕಳು ಕೂಡ ಪ್ರಯಾಣಿಸುತ್ತಿದ್ದು, ಇಂಚನ್ ಬಂದರಿನಿಂದ ಜೆಜು ದ್ವೀಪಕ್ಕೆ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ.

ವೆಬ್ದುನಿಯಾವನ್ನು ಓದಿ