ದೇವಯಾನಿ ಪ್ರಕರಣ: ವೀಸಾ ವಂಚನೆ ಕೈ ಬಿಡಲು ಮನವಿ

ಭಾನುವಾರ, 19 ಜನವರಿ 2014 (15:42 IST)
PTI
ತಮ್ಮ ವಿರುದ್ಧ ಹೊರಿಸಲಾಗಿರುವ ವೀಸಾ ವಂಚನೆ ಪ್ರಕರಣವನ್ನು ಕೈಬಿಡುವಂತೆ ಭಾರತೀಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರು ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆ ದಾಖಲಿಸಲು ಅಮೆರಿಕದ ನ್ಯಾಯಾಲಯ ಪ್ರಾಸಿಕ್ಯೂಟರ್ ಪ್ರೀತ್ ಬರಾರ ಅವರಿಗೆ ಇದೇ 31ರ ವರೆಗೂ (ಜನವರಿ) ಅವಕಾಶ ನೀಡಿದೆ.

ದೇವಯಾನಿ ಅವರ ಪರವಾಗಿ ಅವರ ವಕೀಲ ಡೇನಿಯಲ್ ಅರ್ಶಾಕ್ ಅವರು ಇದೇ ಜನವರಿ 14ರಂದು, ದೋಷಾರೋಪ, ಜಾಮೀನು ಷರತ್ತುಗಳನ್ನು ಕೈಬಿಡುವಂತೆ ಮತ್ತು ‘ಬಹಿರಂಗ’ ಬಂಧನ ವಾರೆಂಟ್ ಅಥವಾ ಆರೋಪಗಳ ಹಿನ್ನೆಲೆಯಲ್ಲಿ ಅವರ ಹಸ್ತಾಂತರದ ಮನವಿಯನ್ನು ಪುರಸ್ಕರಿಸದಂತೆ ಅಮೆರಿಕದ ಜಿಲ್ಲಾ ನ್ಯಾಯಾಲಯವೊಂದರಲ್ಲಿ 13 ಪುಟಗಳ ‘ಮನವಿ’ ಅರ್ಜಿ ಸಲ್ಲಿಸಿದ್ದರು.

ದೇವಯಾನಿ ಅವರ ‘ಮನವಿ’ ಅರ್ಜಿಗೆ ಅಮೆರಿಕ ಸರ್ಕಾರದ ಪ್ರತಿಕ್ರಿಯೆ ದಾಖಲಿಸಲು ಹಾಗೂ ಅದನ್ನು ಸುಮಾರು 25 ಪುಟಗಳಷ್ಟು ವಿಸ್ತೃತವಾಗಿ ಸಲ್ಲಿಸಲು ಜನವರಿ 31ರವರೆಗೂ ಕಾಲಾವಕಾಶ ನೀಡುವಂತೆ ಕೋರಿ ಅಮೆರಿಕದ ಜಿಲ್ಲಾ ನ್ಯಾಯಾಧೀಶ ಶಿರಾ ಶೆಹಿಡ್ಲಿನ್ ಅವರಿಗೆ ಭಾರತೀಯ ಮೂಲಕ ಬರಾರ ಅವರು ಶುಕ್ರವಾರವಷ್ಟೇ ಕೋರಿದ್ದರು.

ವೆಬ್ದುನಿಯಾವನ್ನು ಓದಿ