ದೇವರ ತಪ್ಪುಗಳನ್ನು ಸರಿಪಡಿಸುವ ಸೆಕ್ಸ್ ಬದಲಾವಣೆ ಶಸ್ತ್ರಚಿಕಿತ್ಸಕ ಡಾ.ಕಿಮ್

ಶುಕ್ರವಾರ, 4 ಏಪ್ರಿಲ್ 2014 (13:21 IST)
PR
PR
ಬ್ಯೂಸಾನ್(ದಕ್ಷಿಣ ಕೊರಿಯಾ): ಹೆಣ್ಣಾಗಿ ಜನಿಸಿದ್ದ ಬೌದ್ಧ ಭಿಕ್ಷುವಿಗೆ ಡಾ.ಕಿಮ್ ಸಿಯೋಕ್-ಕ್ವುನ್ ಕಾರ್ಯನಿರ್ವಹಿಸುವ ಪುರುಷ ಜನನಾಂಗವನ್ನು ಸೃಷ್ಟಿಸಿದಾಗ ಸಂಪ್ರದಾಯವಾದಿ ರಾಷ್ಟ್ರದಲ್ಲಿ ಅದರಿಂದ ಉಂಟಾಗುವ ಮುಜುಗರದ ಬಗ್ಗೆ ಅವರಿಗೆ ಸಂಪೂರ್ಣ ಅರಿವಿತ್ತು. ದೇವರ ಇಚ್ಛೆಗೆ ಪ್ರತಿರೋಧ ಒಡ್ಡಲು ನಾನು ನಿರ್ಧರಿಸಿದೆ ಎಂದು 61 ವರ್ಷ ವಯಸ್ಸಿನ ಕಿಮ್ ಬೌದ್ಧ ಭಿಕ್ಷುವಿನ ಯಶಸ್ವಿ ಶಸ್ತ್ರಚಿಕಿತ್ಸೆಗೆ ಮುನ್ನ ಹೇಳಿದ್ದಾರೆ.ಮೊದಲಿಗೆ ನನ್ನಲ್ಲಿ ಒಂದು ರೀತಿ ಪಾಪ ಪ್ರಜ್ಞೆ ಆವರಿಸಿತ್ತು. ಆದರೆ ನನ್ನ ರೋಗಿಗಳು ಹತಾಶೆಯಿಂದ ಇಂತಹ ಶಸ್ತ್ರಚಿಕಿತ್ಸೆಗಳನ್ನು ಬಯಸಿದ್ದರು.

ಅದಿಲ್ಲದಿದ್ದರೂ ಆತ್ಮಹತ್ಯೆಗೆ ಅವರು ತಯಾರಾಗಿದ್ದರು ಎಂದು ಕಿಮ್ ಹೇಳಿದ್ದಾರೆ.ಕಿಮ್ ಲೈಂಗಿಕತೆ ಮತ್ತು ಲಿಂಗದ ಬಗ್ಗೆ ಜನರ ದೃಷ್ಟಿಕೋನವನ್ನು ನಿಧಾನವಾಗಿ ಬದಲಿಸುತ್ತಿರುವ ಪ್ರವರ್ತಕರಾಗಿದ್ದಾರೆ. ಲೈಂಗಿಕತೆ ಕುರಿತು ಮಾತನಾಡುವುದು ನಿಷಿದ್ಧ ಎಂದು ಅಲ್ಲಿನ ಜನರು ಭಾವಿಸಿದ್ದರು. ಕಳೆದ 28 ವರ್ಷಗಳಲ್ಲಿ ಅವರು ಸುಮಾರು 320 ಸೆಕ್ಸ್ ಬದಲಾವಣೆ ಶಸ್ತ್ರಚಿಕಿತ್ಸೆಗಳನ್ನು ನಿರ್ವಹಿಸಿದ್ದಾರೆ.11 ಗಂಟೆಗಳ ಶಸ್ತ್ರಚಿಕಿತ್ಸೆಗೆ ಒಳಪಟ್ಟ ಭಿಕ್ಷು ಬೌದ್ಧ ಸಂಪ್ರದಾಯವಾದಿಗಳ ಭಯದಿಂದ ಸಂದರ್ಶನ ನೀಡಲು ಹಿಂಜರಿದಿದ್ದರು. ಭಿಕ್ಷು ಹಾರ್ಮೋನ್ ಚಿಕಿತ್ಸೆ ಪಡೆಯುತ್ತಿದ್ದು, ಸುದೀರ್ಘ ಕಾಲದಿಂದ ಪುರುಷನಂತೆ ಜೀವಿಸಿದ್ದಾರೆಂದು ಕಿಮ್ ಹೇಳಿದರು.

ವೆಬ್ದುನಿಯಾವನ್ನು ಓದಿ