ನಟ ಹಾಫ್‌ಮನ್ ನಿವಾಸದಲ್ಲಿ ಹೆರಾಯಿನ್ ಪೊಟ್ಟಣಗಳು ಪತ್ತೆ

ಮಂಗಳವಾರ, 4 ಫೆಬ್ರವರಿ 2014 (14:56 IST)
PR
PR
ನ್ಯೂಯಾರ್ಕ್: ಹಾಲಿವುಡ್ ಚಿತ್ರನಟ ಫಿಲಿಪ್ ಸೈಮೋರ್ ಹಾಫ್‌ಮನ್ ಡ್ರಗ್‌ ಓವರ್‌ಡೋಸ್‌ನಿಂದ ನಟ ಮೃತಪಟ್ಟಿರುವುದು ಪೊಲೀಸರಿಗೆ ಖಚಿತವಾಗಿದೆ. ಹಾಫ್‌ಮನ್ ಅವರ ನಿವಾಸದಲ್ಲಿ ಪತ್ತೆಯಾದ ಅನೇಕ ಪ್ಲಾಸ್ಟಿಕ್ ಪೊಟ್ಟಣಗಳಲ್ಲಿ ಹೆರಾಯಿನ್ ಕಂಡುಬಂದಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಹೆರಾಯಿನ್ ಮಾದಕವಸ್ತುವಿಗೆ ಬೇರಾವುದೇ ಮಿಶ್ರಣ ಮಾಡಲಾಗಿದೆಯೇ ಎನ್ನುವುದನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ನಟನ ಸಾವಿಗೆ ಕಾರಣವಾದ ಅಂಶದ ಬಗ್ಗೆ ವೈದ್ಯರು ಅಧಿಕೃತ ನಿರ್ಧಾರಕ್ಕೆ ಇನ್ನೂ ಬಂದಿರದಿದ್ದರೂ, ಪೊಲೀಸರು ಡ್ರಗ್ ಓವರ್‌ಡೋಸ್‌ನಿಂದ ಮೃತಪಟ್ಟಿರುವುದಾಗಿ ಶಂಕಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಹಾಫ್‌ಮನ್ ಅವರು ಕೈಯಲ್ಲಿ ಸಿರಿಂಜ್ ಹಿಡಿದು ಶೌಚಾಲಯದಲ್ಲಿ ಮೃತಸ್ಥಿತಿಯಲ್ಲಿ ಪತ್ತೆಯಾಗಿದ್ದರು ಎಂದು ಕಾನೂನುಜಾರಿ ಅಧಿಕಾರಿಗಳು ತಿಳಿಸಿದ್ದಾರೆ. ಹಾಫ್‌ಮನ್ ಸಾವು ಹೆರಾಯಿನ್ ಮತ್ತು ಸಂಶ್ಲೇಷಿತ ಮಾರ್ಫಿನ್ ಮಿಶ್ರಣದಿಂದ ಉಂಟಾಗಿರಬಹುದೇ ಎಂಬ ಸಂಶಯ ಆವರಿಸಿದ್ದು, ಅದನ್ನು ದೃಢೀಕರಿಸುವ ಅಧಿಕೃತ ಮಾಹಿತಿ ಹೊರಬಂದಿಲ್ಲ.

ವೆಬ್ದುನಿಯಾವನ್ನು ಓದಿ