ನಿಮಗಿದು ಗೊತ್ತೆ? ಅಮೇರಿಕಾದಲ್ಲಿ ರಸ್ತೆಯಲ್ಲಿ ಬಟ್ಟೆ ಬಿಚ್ಚುತ್ತಾರೆ.!

ಬುಧವಾರ, 2 ಏಪ್ರಿಲ್ 2014 (15:02 IST)
ನಿಮಗೆ ಈ ವಿಷಯ ಅಚ್ಚರಿ ಎನಿಸಬಹುದು. ಕೆಲವರಿಗೆ ಇದು ಅಸಹ್ಯ ಎಂತಲೂ ಅನಿಸಬಹುದು. ಆದ್ರೂ ಇಲ್ಲಿನ ಜನಗಳ ವರ್ತನೆ ಅಸಹ್ಯ ಎನಿಸುವಂತೆಯೇ ಇದೆ ಎಂದು ಸುಮ್ಮನಾಗಬೇಕು ಅಷ್ಟೆ. ಇಲ್ಲಿನ ಕೆಲವರು ರಸ್ತೆಗಳಲ್ಲೇ ಬಟ್ಟೆ ಬಿಚ್ಚುತ್ತಾರೆ. ಅಕ್ಕ ಪಕ್ಕ ಯಾರು ಇದ್ದಾರೆ ಅನ್ನೋ ಅರಿವೂ ಅವರಿಗೆ ಬೇಕಾಗಿಲ್ಲ.

ಇಷ್ಟೆ ಆಗಿದ್ದರೆ ಹೋಗಲಿ ಎನ್ನಬಹುದಿತ್ತು. ಆದ್ರೆ ಸಾರ್ವಜನಿಕ ಸ್ಥಳಗಳಲ್ಲಿ ಇವರು ಮಾಡುವಂತ ಸಹ್ಯಕರ ವರ್ತನೆಗಳಿಗೆ ವಿಶ್ವದ ಜನರು ಛೀ... ಅಂತಿದ್ದಾರೆ. ಇಲ್ಲಿನ ರಸ್ತೆಗಳಲ್ಲಿ ಯಗ್ಗು ಸಿಗ್ಗಿಲ್ಲದೆ ಸುಸು ಮಾಡ್ತಾರೆ. ಅದೂ ಜನರ ಎದುರಲ್ಲೇ...! ಇನ್ನು ಮೆಟ್ರೋ ಟ್ರೈನ್‌ಗಳಲ್ಲಿಯೂ ಈ ವರ್ತನೆ ಹಾಗೆಯೇ ಮುಂದುವರಿದಿದೆ. ಇಲ್ಲಿನ ನ್ಯೂಯಾರ್ಕ ನಗರದ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವ ಜನರಲ್ಲಿ ಕೆಲವರು ಎಲ್ಲರ ಎದುರಲ್ಲೆ ತಮ್ಮ ಬಟ್ಟೆಗಳನ್ನು ಬಿಚ್ಚುತ್ತಾರೆ... ನಂತರ ತಮ್ಮ ಸೂಟ್‌ಕೇಸಿನಲ್ಲಿ ಇರುವ ಬೇರೆ ಬಟ್ಟೆಗಳನ್ನು ಎಲ್ಲರ ಎದುರಲ್ಲಿಯೇ ಹಾಕಿಕೊಳ್ತಾರೆ...

ಇನ್ನು ಮುಕ್ತ ಕಾಮಕ್ಕೆ ಇಲ್ಲಿ ಅವಕಾಶವಿದ್ದು ಯಾವುದೇ ನಿರ್ಭಂಧವಿಲ್ಲ. ಚುಂಬನ ಎನ್ನುವುದ ತೀರ ಸರಳ ಎಂಬಂತಾಗಿದೆ. ಹೀಗಾಗಿ ಮೆಟ್ರೋ ಟ್ರೈನುಗಳು, ಎಟಿಎಂ ಕೇಂದ್ರಗಳು, ರೈಲ್ವೇ ನಿಲ್ದಾಣಗಳು ಸೆರಿದಂತೆ ಸಾರ್ವಜನಿಕ ಸ್ಥಳಗಳು ಚುಂಬನ ಕೇಂದ್ರಗಳಾಗಿ ಮಾರ್ಪಟ್ಟಿವೆ. ಎಲ್ಲಿ ಕಂಡರಲ್ಲಿ ಕಾಮಾಲಾಪನೆಗಳು ಭುಗಿಲೇಳುತ್ತಿವೆ. ಇನ್ನಷ್ಟು ಮಾಹಿತಿ ಮುಂದಿನ ಪುಟದಲ್ಲಿ....

PTI
PTI
ಇಷ್ಟಾದರೂ ಇಲ್ಲಿ ಯಾರೂ ಕ್ಯಾರೆ ಎನ್ನುವುದಿಲ್ಲ. ಯಾಕೆಂದ್ರೆ ಅಮೇರಿಕನ್ನರಿಗೆ ಇದೆಲ್ಲಾ ಕಾಮನ್ ಆಗಿ ಹೋಗಿದೆ. ಹೀಗಾಗಿ ಅವರು ಸುಮ್ಮನಾಗುತ್ತಾರೆ. ಕೆಲವರು ಹಾಕಿಕೊಂಡು ಬರುವ ಬಟ್ಟೆಗಳಿಂದ ಒಳ ವಸ್ತ್ರಗಳು ಎದುರಿಗಿದ್ದವರ ಮುಖಕ್ಕೆ ಹೊಡೆಯುವಂತಿರುತ್ತದೆ. ಗುಪ್ತಾಂಗಗಳು ಮುಕ್ತ ಮುಕ್ತವಾಗಿ ಜನರಿಗೆ ಬಿಟ್ಟಿ ದರ್ಶನವಗುತ್ತದೆ. ಆದ್ರೆ ಇದೆಲ್ಲಾ ಫ್ಯಾಷನ್ ಎಂಬಂತೆ ಅಲ್ಲಿನ ಜನರು ಸುಮ್ಮನಾಗುತ್ತಾರೆ.

ಈ ಅಸಹ್ಯಕರ ಪದ್ಧತಿಯನ್ನೇ ಕೆಲವರು ಫ್ಯಾಷನ್ ಎಂದು ವಿವಿಧ ದೇಶಗಳ ಜನರುಗಳು ಕಾಪಿ ಮಾಡುತ್ತಿದ್ದಾರೆ ಅನ್ನೋದು ಇನ್ನೊಂದು ದೊಡ್ಡ ದುರಂತ.

ವೆಬ್ದುನಿಯಾವನ್ನು ಓದಿ