ನೀನಾಗೆ ಮಿಸ್ ಅಮೆರಿಕ ಗರಿ: ಟ್ವಿಟರ್‌ನಲ್ಲಿ ಹರಿದಾಡಿತು ರೇಸಿಸ್ಟ್ ಕಾಮೆಂಟ್ಸ್

ಸೋಮವಾರ, 16 ಸೆಪ್ಟಂಬರ್ 2013 (16:38 IST)
PR
PR
ನ್ಯೂಜೆರ್ಸಿ: ವಿಜಯವಾಡ ಮೂಲದ ಭಾರತೀಯ ಯುವತಿ ನೀನಾ ದಾವುಲುರಿ 2013ರ ಸಾಲಿನ ಮಿಸ್ ಅಮೆರಿಕಾ ಸೌಂದರ್ಯ ಸ್ಪರ್ಧೆಯಲ್ಲಿ ಭಾನುವಾರ ವಿಜೇತರಾಗಿ ಇತಿಹಾಸ ನಿರ್ಮಿಸಿದರು. ಮಿಸ್ ಅಮೆರಿಕಾದಲ್ಲಿ ಕಿರೀಟವನ್ನು ಧರಿಸುವ ಮೂಲಕ ನೀನಾ ಈ ಪ್ರಶಸ್ತಿಯನ್ನು ಗೆದ್ದ ಪ್ರಥಮ ಭಾರತೀಯ ಮೂಲಕ ಅಮೆರಿಕನ್ನರಾದರು. 49 ರಾಜ್ಯಗಳ ಸ್ಪರ್ಧಿಗಳನ್ನು ಸೋಲಿಸಿದ ಕೊಲಂಬಿಯಾ ಜಿಲ್ಲೆ, ಯುಎಸ್ ವಿರ್ಜಿನ್ ಐಲೆಂಡ್ಸ್ ಮತ್ತು ಪೊರ್ಟೊರಿಕೊದ ಯುವತಿ ನೀನಾ, ಮಾಧ್ಯಮದ ಜತೆ ಮಾತನಾಡುತ್ತಾ, ಈ ಸಂಸ್ಥೆಯು ವೈವಿಧ್ಯತೆಯನ್ನು ಆಚರಿಸಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನಾನು ಪ್ರಥಮ ಭಾರತೀಯ ಮೂಲದ ಮಿಸ್ ಅಮೆರಿಕಾ ಆಗಿರುವುದಕ್ಕೆ ತುಂಬಾ ಹೆಮ್ಮೆಯೆನಿಸುತ್ತದೆ.


ನೀನಾ ದಾವುಲುರಿ ಮಿಸ್ ಅಮೆರಿಕಾ ಪ್ರಶಸ್ತಿ ಕಿರೀಟ ಧರಿಸಿದರೆ, ಮಿಸ್ ಕ್ಯಾಲಿಫೋರ್ನಿಯಾ ಕ್ರಿಸ್ಟಲ್ ಲೀ ರನ್ನರ್ ಅಪ್ ಪ್ರಶಸ್ತಿಯನ್ನು ಬುಟ್ಟಿಗೆ ಹಾಕಿಕೊಂಡರು.
ನೀನಾ ಪ್ರಶಸ್ತಿ ವಿಜೇತರಾಗುತ್ತಿದ್ದಂತೆ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್‌ನಲ್ಲಿ ಜನಾಂಗೀಯ ದ್ವೇಷದ ಪ್ರತಿಕ್ರಿಯೆಗಳು ಹರಿದಾಡುತ್ತಿವೆ. ಒಂದು ಪ್ರತಿಕ್ರಿಯೆ ಹೀಗಿದೆ: ಮಿಸ್ ಅಮೆರಿಕಾಗೆ ಮುಸ್ಲಿಂ ಮಹಿಳೆಯನ್ನು ಆಯ್ಕೆ ಮಾಡಿದರು. ಇದರಿಂದ ಒಬಾಮಾಗೆ ಸಂತೋಷವಾಗಿರಬಹುದು. ಬಹುಶಃ ಅವರೂ ಒಂದು ವೋಟ್ ಮಾಡಿರಬಹುದು."ಮಿಸ್ ಅಮೆರಿಕಾ? ಅದರ ಅರ್ಥವೇನೆಂದರೆ ಮಿಸ್ 7-11' ಎಂದು ಜಾಲಿನ್ ಲೆದರ್‌ಮೆನ್ ಟ್ವೀಟ್ ಮಾಡಿದ್ದಾರೆ. ಆದರೆ ಅದಕ್ಕಿಂತ ಕೆಟ್ಟದಾಗಿ ಪ್ರಶಸ್ತಿ ವಿಜೇತಳನ್ನು ಭಯೋತ್ಪಾದನೆ ಜತೆ ಬೆಸೆಯುವುದಕ್ಕೂ ಕೆಲವು ಜನರು ಹಿಂಜರಿದಿಲ್ಲ. " ಈಗಿನವಳು ಮಿಸ್ ಅಮೆರಿಕ ಅಥವಾ ಮಿಲ್ ಅಲ್ ಖಾಯಿದಾ?"ಎಂದು ಪ್ರಶ್ನಿಸುವ ಮೂಲಕ ಗೇಲಿ ಮಾಡಿದ್ದಾರೆ." 9/11 ಕೇವಲ ನಾಲ್ಕು ದಿನಗಳ ಹಿಂದೆಯಿತ್ತು ಮತ್ತು ಅವಳು ಮಿಸ್ ಅಮೆರಿಕಾ ಗಳಿಸಿದ್ದಾಳೆ" ಎಂದು ಲ್ಯೂಕ್ ಬ್ರೆಸಿಲಿ ಪೋಸ್ಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ