ನೆಲ್ಸನ್ ಮಂಡೇಲಾಗೆ ಸರ್ಕಾರಿ ಗೌರವದ ಅಂತ್ಯಕ್ರಿಯೆ

ಭಾನುವಾರ, 15 ಡಿಸೆಂಬರ್ 2013 (13:53 IST)
PR
PR
ಕುನು: ದಕ್ಷಿಣ ಆಫ್ರಿಕಾ ಇಂದು ಜನಾಂಗ ಭೇದ ವಿರುದ್ಧ ಹೋರಾಡಿದ, ಎರಡನೇ ಗಾಂಧಿ ಎನಿಸಿದ ನೆಲ್ಸನ್ ಮಂಡೇಲಾ ಅಂತ್ಯಕ್ರಿಯೆಯನ್ನು ನೆರವೇರಿಸಿತು.ಜನಾಂಗೀಯ ಭೇದದ ಜೈಲುಗಳಲ್ಲಿ 27 ವರ್ಷಗಳ ಸೆರೆವಾಸ ಅನುಭವಿಸಿದ ನೊಬೆಲ್ ಶಾಂತಿ ಪುರಸ್ಕೃತ ಮಂಡೇಲಾ ಅವರನ್ನು ಸರ್ಕಾರಿ ಗೌರವಗಳೊಂದಿಗೆ ಮತ್ತು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು. ಪೂರ್ವ ಕೇಪ್‌ನಲ್ಲಿ ನಡೆದ ಅಂತ್ಯಕ್ರಿಯೆಲ್ಲಿ ದಕ್ಷಿಣ ಆಫ್ರಿಕಾದ ಮುಖಂಡರು, ಬ್ರಿಟನ್ ರಾಜಕುಮಾರ ಚಾರ್ಲ್ಸ್ ಸೇರಿದಂತೆ ಅನೇಕ ವಿದೇಶಿ ಗಣ್ಯರು ಪಾಲ್ಗೊಂಡರು.

ಶನಿವಾರ ಕುನುವಿನಲ್ಲಿರುವ ಪೂರ್ವಿಕರ ಮನೆಗೆ ಮಂಡೇಲಾ ಪಾರ್ಥಿವ ಶರೀರವನ್ನು ತಂದಾಗ, ಸ್ಥಳೀಯರು ಸಂತೋಷಗೊಂಡು ಅವರು ಪ್ರೀತಿಯಿಂದ ಕರೆಯುವ 'ಮಾಡೀಬಾ' ಮನೆಗೆ ಆಗಮಿಸಿದರೆಂದು ಉದ್ಗರಿಸಿದರು.

ವೆಬ್ದುನಿಯಾವನ್ನು ಓದಿ