ನೈಜೀರಿಯ: ನಾಲ್ವರು ಭಾರತೀಯರ ಬಿಡುಗಡೆ

ಮಂಗಳವಾರ, 30 ಅಕ್ಟೋಬರ್ 2007 (15:22 IST)
ನೈಜೀರಿಯದಲ್ಲಿ ಬಂದೂಕುದಾರಿಯೊಬ್ಬ ಅಪಹರಿಸಿದ ಮೂವರು ತಮಿಳರು ಮತ್ತು ಒಬ್ಬ ಮಹಾರಾಷ್ಟ್ರೀಯನನ್ನು ಮಂಗಳವಾರ ಬೆಳಿಗ್ಗೆ ಬಿಡುಗಡೆ ಮಾಡಿದ ಬಳಿಕ ಅವರ ಕುಟುಂಬಗಳು ಹರ್ಷಿಸಿವೆ. ಅಪಹರಣಕಾರರು 250 ಕೋಟಿ ರೂ. ಒತ್ತೆಹಣವನ್ನು ಕೇಳಿದ್ದಾರೆಂದು ಹೇಳಲಾಗಿದ್ದು, ಹಣದ ಮೊತ್ತವನ್ನು ನೀಡಲಾಗಿದೆಯೇ ಇಲ್ಲವೇ ಎಂದು ತಕ್ಷಣಕ್ಕೆ ಗೊತ್ತಾಗಿಲ್ಲ.

ತಮ್ಮ ಸೋದರ ನೈಜೀರಿಯದಿಂದ ಕರೆ ಮಾಡಿ ಅವರನ್ನು ಬಿಡುಗಡೆ ಮಾಡಿರುವ ವಿಷಯ ತಿಳಿಸಿದನೆಂದು ಖಾಸಗಿ ತಮಿಳು ಟೆಲಿವಿಷನ್ ಚಾನೆಲ್‌ಗೆ ಸುದರ್ಶನ್ ಜಯಪಾಲ್ ಎಂಬ ಅಪಹೃತನ ಸೋದರ ತಿಳಿಸಿದ್ದಾರೆ.

ಎಲ್ಲ ನಾಲ್ವರು ಸುರಕ್ಷಿತವಾಗಿದ್ದು, ಅಪಹರಣಕಾರರು ಕಿರುಕುಳ ನೀಡಿಲ್ಲ ಎಂದು ಸೋದರ ತಿಳಿಸಿದ್ದಾನೆಂದು ಕಾಮರಾಜ್ ಹೇಳಿದರು.ತಮಿಳುನಾಡು ಸರ್ಕಾರ ಈ ಬಗ್ಗೆ ಉಪಕ್ರಮ ಕೈಗೊಂಡ ಬಳಿಕ ಕೇಂದ್ರ ಸರ್ಕಾರವು ರಾಯಭಾರಿ ಕಚೇರಿ ಮೂಲಕ ಇಟಲಿಯ ತೈಲ ಕಂಪನಿಯ ಮೇಲೆ ಒತ್ತಡ ಹೇರಿ ಅವರ ಬಿಡುಗಡೆ ಮಾಡಿಸಿತೆಂದು ಮೂಲಗಳು ಹೇಳಿವೆ.

ವೆಬ್ದುನಿಯಾವನ್ನು ಓದಿ