ನೋಬೆಲ್‌ ಗೆದ್ದ ವಿಜ್ಞಾನಿ ಬಳಿ ಮೊಬೈಲ್ ಇಲ್ಲವಂತೆ.!

ಭಾನುವಾರ, 13 ಅಕ್ಟೋಬರ್ 2013 (12:05 IST)
PTI
PTI
'ದೇವಕಣ' ಸಿದ್ಧಾಂತವನ್ನು ಪ್ರತಿಪಾದಿಸಿದ ವಿಜ್ಞಾನಿ ಪೀಟರ್‌ ಹಿಗ್ಸ್‌ ಅವರು ಮೊಬೈಲ್‌ ಮತ್ತು ಕಂಪ್ಯೂಟರನ್ನು ಬಳಸುವುದಿಲ್ಲವಂತೆ. ಅಷ್ಟೆ ಅಲ್ಲ, ಅವರದ್ದು ಸ್ವಂತ ಮೊಬೈಲ್‌ ಇಲ್ಲವೇ ಇಲ್ಲವಂತೆ. ಇದನ್ನು ಸ್ವತಃ ಪೀಟರ್‌ ಹಿಗ್ಸ್‌ ಅವರೇ ಮಾಧ್ಯಮ ಮಿತ್ರರ ಎದುರು ಬಹಿರಂಗ ಪಡಿಸಿದ್ದಾರೆ. 'ನನಗೆ ನೊಬೆಲ್‌ ಪ್ರಶಸ್ತಿ ಬಂದಿದೆ ಎಂಬ ವಿಷಯವನ್ನು ಸ್ಥಳೀಯ ವ್ಯಕ್ತಿಯೊಬ್ಬ ತಿಳಿಸಿದನು. ಅವನು ಶುಭಾಶಯ ಕೋರಿದಾಗಲೇ ನನಗೆ ನೊಬೆಲ್‌ ಪ್ರಶಸ್ತಿ ಸಿಕ್ಕಿದ್ದರ ಬಗ್ಗೆ ಗೊತ್ತಾಗಿದ್ದು' ಎಂದು ಹಿಗ್ಸ್‌ ಅವರು ತಮ್ಮ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಡಾ. ಫ್ರಾಂಕೊಯಿಸ್‌ ಎಂಗ್ಲರ್ಟ್‌ ಅವರೊಂದಿಗೆ ಜೊತೆಗೂಡಿ ದೇವಕಣವನ್ನು ಸಂಶೋಧನೆ ಮಾಡಿದಕ್ಕಾಗಿ ಪೀಟರ್‌ ಹಿಗ್ಸ್‌ ಅವರಿಗೆ ಇತ್ತೀಚೆಗಷ್ಟೇ ನೋಬೆಲ್‌ ಪ್ರಶಸ್ತಿ ಸಿಕ್ಕಿತ್ತು. ಡಾ ಫ್ರಾಂಕಾಯಿಸ್‌ ಕೂಡ ಇದೇ ಮಾತನ್ನು ಹೇಳ್ತಾರೆ. "ಹಿಗ್ಸ್‌ ಅವರು ಇದುವರೆಗೂ ಯಾವುದೇ ಮೊಬೈಲ್‌ ಫೋನ್‌ ಅನ್ನು ಬಳಸಿಲ್ಲ. ಅವರು ಕಂಪ್ಯೂಟರ್‌ ಕೂಡ ಬಳಸುವುದಿಲ್ಲ. ಸದಾ ತಮ್ಮ ಸಂಶೋಧನೆಯಲ್ಲಿಯೇ ಮಗ್ನರಾಗಿರುತ್ತಾರೆ. ಹೀಗಾಗಿ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಸಾಧನೆಯ ರಹಸ್ಯವನ್ನು ಬಿಚ್ಚಿಟ್ಟರು.

ವೆಬ್ದುನಿಯಾವನ್ನು ಓದಿ