ಪಾಕ್‌ನಲ್ಲಿ 11 ಆತ್ಮಹತ್ಯೆ ಬಾಂಬರ್‌ಗಳು

ಆತ್ಮಹತ್ಯೆ ಬಾಂಬ್ ದಾಳಿಗಳಿಂದ ತಲ್ಲಣಿಸಿದ ಪಾಕಿಸ್ತಾನದಲ್ಲಿ ಇನ್ನೂ 11 ಮಂದಿ ಆತ್ಮಹತ್ಯೆ ಬಾಂಬರ್‌ಗಳು ಅಡಗಿದ್ದು, ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯ ಅವಳಿ ನಗರಗಳಲ್ಲಿ ಪಾಕಿಸ್ತಾನ ಪೊಲೀಸರು ವ್ಯಾಪಕ ಶೋಧ ನಡೆಸಿದ್ದಾರೆ.

ರಾವಲ್ಪಿಂಡಿಯಲ್ಲಿ ಅಧ್ಯಕ್ಷ ಮುಷರ್ರಫ್ ಅವರ ಶಿಬಿರಕಚೇರಿ ಬಳಿ ಸಂಭವಿಸಿದ ಆತ್ಮಹತ್ಯೆ ದಾಳಿಗಳಲ್ಲಿ ಅವರಲ್ಲಿ ಕೆಲವರು ಪಾಲ್ಗೊಂಡಿದ್ದರು ಎಂದು ಅವು ಹೇಳಿವೆ. ನಮಗೆ ನಿರ್ದಿಷ್ಟ ವಿವರಗಳನ್ನು ಒದಗಿಸಿಲ್ಲ. ಆದರೆ ಮೂವರು ಪುರುಷರು ಮತ್ತು ಮೂವರು ಮಹಿಳೆಯರಿಂದ ಕೂಡಿದ 6 ಮಂದಿಯ ತಂಡ ಆತ್ಮಹತ್ಯೆ ಬಾಂಬರ್‌ಗಳು ಎಂದು ಗುಪ್ತಚರ ಇಲಾಖೆ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಲಾಲ್ ಮಸೀದಿ ಸಂಕೀರ್ಣದ ಮೇಲೆ ಕಾರ್ಯಾಚರಣೆಗೆ ಪ್ರತೀಕಾರ ತೀರಿಸಿಕೊಳ್ಳಲು ಐದು ಮಂದಿ ಭಯೋತ್ಪಾದಕರು ಈಗಾಗಲೇ ಅವಳಿ ನಗರಗಳಲ್ಲಿ ಕಳೆದ ಆಗಸ್ಟ್‌ನಿಂದ ಇದ್ದಾರೆ. ಹೊಸಬರ 6 ಮಂದಿ ತಂಡವು ಸ್ವಾಟ್ ಕಣಿವೆಯಲ್ಲಿ ತಾಲಿಬಾನ್ ಪರ ಉಗ್ರರ ವಿರುದ್ಧ ಮಿಲಿಟರಿ ಕಾರ್ಯಾಚರಣೆ ವಿರುದ್ಧ ಸೇಡು ತೀರಿಸಿಕೊಳ್ಳಲು ಆಗಮಿಸಿದ್ದಾರೆಂದು ನಂಬಲಾಗಿದೆ.

ವೆಬ್ದುನಿಯಾವನ್ನು ಓದಿ