ಪಾಕ್‌ನಲ್ಲಿ 13 ವರ್ಷದ ಬಾಲಕನಿಗೆ 50 ವರ್ಷಗಳ ಜೈಲು ಶಿಕ್ಷೆ

ಸೋಮವಾರ, 16 ಡಿಸೆಂಬರ್ 2013 (16:00 IST)
PR
PR
ಲಾಹೋರ್: ದೆಹಲಿಯಲ್ಲಿ ನಿರ್ಭಯಾಳ ಅತ್ಯಾಚಾರ ಮತ್ತು ಹತ್ಯೆಯಾಗಿ ಇಂದಿಗೆ ಒಂದು ವರ್ಷ ಪೂರೈಸಿದೆ. ನಿರ್ಭಯಾಳ ಅತ್ಯಾಚಾರ ಮತ್ತು ಹತ್ಯೆಯಲ್ಲಿ ಭಾಗಿಯಾದ ಅಪ್ರಾಪ್ತ ವಯಸ್ಕನನ್ನು ಬಾಲಾಪರಾಧದ ಕೋರ್ಟ್‌ನಲ್ಲಿ ಶಿಕ್ಷೆ ವಿಧಿಸಲಾಯಿತು. ಇದರಿಂದ ಮರಣದಂಡನೆ ಶಿಕ್ಷೆಯಿಂದ ಅವನು ತಪ್ಪಿಸಿಕೊಂಡ. ಆದರೆ ಪಾಕಿಸ್ತಾನದ ಕೋರ್ಟೊಂದು ಕೋರ್ಟ್ ಆವರಣದಲ್ಲಿ ವಿಚಾರಣಾಧೀನ ಕೈದಿಯನ್ನು ಹತ್ಯೆ ಮಾಡಿದ 13 ವರ್ಷ ವಯಸ್ಸಿನ ಬಾಲಕನಿಗೆ 50 ವರ್ಷಗಳ ಜೈಲುವಾಸದ ಘನಘೋರ ಶಿಕ್ಷೆ ವರದಿಯಾಗಿದೆ. 13 ವರ್ಷದ ಬಾಲಕ 50 ವರ್ಷ ಸುದೀರ್ಘಕಾಲದ ಜೈಲು ಶಿಕ್ಷೆ ಪೂರೈಸಿ ಹೊರಬರುವಷ್ಟರಲ್ಲಿ 63 ವರ್ಷ ವಯಸ್ಸಿನ ವೃದ್ಧನಾಗಿರುತ್ತಾನೆ.

ಹತ್ಯೆ ಯತ್ನದ ಮೇಲೆ ಬಂಧಿಸಲಾಗಿದ್ದ ಹಫೀಜ್ ಗಿಯಾಸ್‌ನನ್ನು ಹತ್ಯೆ ಮಾಡಿದ ಆರೋಪದ ಮೇಲೆ ಆರೋಪಿಗೆ ಭಯೋತ್ಪಾದನೆ ನಿಗ್ರಹ ಕೋರ್ಟ್ ಶಿಕ್ಷೆ ವಿಧಿಸಿದೆ. ಅವನಿಗೆ 2 ಲಕ್ಷ ರೂ. ದಂಡವನ್ನು ಕೂಡ ವಿಧಿಸಲಾಗಿದೆ. ಘಿಯಾಸ್ ತನ್ನ ತಂದೆಯ ಮೇಲೆ ದಾಳಿ ಮಾಡಿ ಗಾಯಮಾಡಿದ್ದರಿಂದ ಘಿಯಾಸ್‌ ವಿರುದ್ಧ ಸೇಡು ತೀರಿಸಿಕೊಳ್ಳಲು ಬಾಲಕ ಗುಂಡಿಕ್ಕಿ ಕೊಂದಿದ್ದ. ಲಾಹೋರ್‌ಗೆ 80 ಕಿಮೀ ದೂರದ ಗುಜ್ರನ್ ವಾಲಾ ಕೋರ್ಟ್ ಆವರಣದಲ್ಲಿ ಘಿಯಾಸ್‌ನನ್ನು ನ್ಯಾಯಾಧೀಶರ ಎದುರು ಕರೆತರುವಾಗ ಬಾಲಕ ಗುಂಡು ಹಾರಿಸಿಕೊಂದಿದ್ದ.

ವೆಬ್ದುನಿಯಾವನ್ನು ಓದಿ