ಪಾಕ್ ಉಪಚುನಾವಣೆ: ಶಾಬಾಝ್ ನಾಮಪತ್ರ

ಸೋಮವಾರ, 5 ಮೇ 2008 (18:03 IST)
ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಪಿಎಂಎಲ್-ಎನ್ ಅಧ್ಯಕ್ಷ ನವಾಜ್ ಶರೀಫ್ ಅವರ ಸಹೋದರ ಶಾಬಾಝ್ ಶರೀಫ್ ಅವರು ಪಂಜಾಬ್ ಪ್ರಾಂತ್ಯದ ಅಸ್ಸೆಂಬ್ಲಿ ಉಪಚುನಾವಣೆಗೆ ಸ್ಫರ್ಧಿಸಲುನಾಮಪತ್ರ ಸಲ್ಲಿಸಿದ್ದಾರೆ.

ಫೆಬ್ರವರಿ 18ರಂದು ನಡೆದ ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ಅವರನ್ನು ನ್ಯಾಯಾಲಯ ನಿಷೇಧಿಸಿತ್ತು. ಅವರು ಇದೀಗ ಲಾಹೋರಿನ ಎರಡು ಕ್ಷೇತ್ರಗಳಿಂದ ಸ್ಫರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ.

ದೊಡ್ಡ ಸಂಖ್ಯೆಯ ಬೆಂಬಲಿಗರು ಹಾಗೂ ಪಿಎಂಎಲ್-ಎನ್ ಕಾರ್ಯಕರ್ತರೊಂದಿಗೆ ತೆರಳಿದ ಅವರು ನಾಮಪತ್ರಗಳನ್ನು ಸಲ್ಲಿಸಿದರು.

1990ರಲ್ಲಿ ಅವರು ಪಂಜಾಬ್ ಮುಖ್ಯಮಂತ್ರಿಯಾಗಿದ್ದ ವೇಳೆ ಸಂಭವಿಸಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಚುನಾವಣಾ ಸ್ಫರ್ಧೆಯಿಂದ ನಿಷೇಧಿಸಲಾಗಿತ್ತು. ಇದೀಗ ಅವರನ್ನು ನ್ಯಾಯಾಲಯ ಈ ಪ್ರಕರಣದಿಂದ ದೋಷ ಮುಕ್ತವಾಗಿರಿಸಿರುವುದಾಗಿ ಅವರ ಕಾನೂನು ಸಲಹೆಗಾರರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ