ಪಾಕ್ ಗಡಿಯಲ್ಲಿ ನ್ಯಾಟೋ ದಾಳಿ; ಅಮೆರಿಕದಿಂದ ತನಿಖೆ

ಮಂಗಳವಾರ, 29 ನವೆಂಬರ್ 2011 (15:34 IST)
ಅಫ್ಘಾನಿಸ್ತಾನ-ಪಾಕ್‌ ಗಡಿ ಭಾಗದಲ್ಲಿದ್ದ ಪಾಕ್‌ ಗಡಿ ತಪಾಸಣಾ ಕೇಂದ್ರದ ಮೇಲೆ ನ್ಯಾಟೋ ಪಡೆ ನಡೆಸಿದ ವೈಮಾನಿಕ ದಾಳಿಯ ಕುರಿತು ಅಮೆರಿಕದ ಕೇಂದ್ರೀಯ ಸೇನಾ ಪಡೆ ತನಿಖೆ ನಡೆಸಲಿದೆ ಎಂದು ಪೆಂಟಾಗನ್‌ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಅಫ್ಘಾನಿಸ್ತಾನದ ಗಡಿ ಭಾಗದಿಂದ ನ್ಯಾಟೋ ಪಡೆ ಹೆಲಿಕಾಪ್ಟರ್‌ಗಳು ನಡೆಸಿದ ದಾಳಿಯಲ್ಲಿ ಪಾಕಿಸ್ತಾನದ ಸೇನಾ ಪಡೆಯ 25 ಯೋಧರು ಮೃತಪಟ್ಟಿದ್ದರು.

ಪಾಕ್‌- ಅಫ್ಘಾನ್‌ ಗಡಿ ಭಾಗದಲ್ಲಿದ್ದ ಪಾಕ್‌ ಸೇನೆ ಚೆಕ್‌ ಪೋಸ್ಟ್‌ ಮೇಲೆ ನ್ಯಾಟೋ ಪಡೆ ದಾಳಿ ನಡೆಸಲು ಕಾರಣವೇನು ಎಂಬುದರ ಕುರಿತು ಅಮೆರಿಕದ ಸೆಂಟ್ರಲ್‌ ಕಮಾಂಡ್‌ ತನಿಖೆ ನಡೆಸಲಿದೆ ಎಂದು ಪೆಂಟಾಗನ್‌ ವಕ್ತಾರ ಜಾರ್ಜ್‌ ಲಿಟ್ಲ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅಮೆರಿಕದ ಸೇನಾ ಕಾರ್ಯದರ್ಶಿ ಲಿಯೋನ್‌ ಪೆನೆಟ್ಟಾ ಅವರು ನ್ಯಾಟೋ ದಾಳಿಯಿಂದ ಉದ್ಭವಿಸಿರುವ ಪರಿಸ್ಥಿತಿ ಹಾಗೂ ಪಾಕ್‌ನೊಂದಿಗಿನ ಸೇನಾ ಬಾಂಧವ್ಯದ ಬಗ್ಗೆ ತೀವ್ರ ನಿಗಾ ವಹಿಸಲಿದ್ದಾರೆ ಎಂದು ಲಿಟ್ಲ್‌ ತಿಳಿಸಿದ್ದಾರೆ.

ಪಾಕಿಸ್ತಾನ ದಲ್ಲಿ ಭಯೋತ್ಪಾದಕರ ವಿರುದ್ಧ ಸಮರ ಮುಂದುವರಿಯಲಿದೆ ಎಂದು ಹೇಳಿರುವ ಲಿಟ್ಲ್‌, ನ್ಯಾಟೋ ದಾಳಿಯ ಹಿನ್ನೆಲೆಯಲ್ಲಿ ಅಮೆರಿಕ- ಪಾಕ್‌ ಬಾಂಧವ್ಯದಲ್ಲಿ ಸಂಘರ್ಷ ಮತ್ತು ಕಠಿಣ ಹಾದಿಯತ್ತ ಸಾಗಿದೆ ಎಂದು ಹೇಳಿದ್ದಾರೆ. ಆದರೆ ಉಭಯ ರಾಷ್ಟ್ರಗಳೂ ಉತ್ತಮ ಬಾಂಧವ್ಯ ಹೊಂದುವ ಗುರಿ ಹೊಂದಿವೆ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ