ಪಾಕ್; 60 ವರ್ಷದ ನಂತ್ರ ಹಿಂದೂ ಟೆಂಪಲ್ ಮತ್ತೆ ಓಪನ್

ಸೋಮವಾರ, 31 ಅಕ್ಟೋಬರ್ 2011 (18:49 IST)
ಮಹಿಳೆಯೊಬ್ಬರ ಅವಿರತ ಹೋರಾಟದ ಫಲವಾಗಿ ಪಾಕಿಸ್ತಾನದ ಪೇಶಾವರದಲ್ಲಿ 60 ವರ್ಷಗಳಿಂದ ಮುಚ್ಚಿದ್ದ ಐತಿಹಾಸಿಕ ದೇವಾಲಯದ ಬಾಗಿಲನ್ನು ಮತ್ತೆ ತೆರೆಯುವಂತೆ ನ್ಯಾಯಾಲಯ ಆದೇಶ ನೀಡಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಕೋರ್ಟ್‌ ಆದೇಶದ ಮೇರೆಗೆ ಪೇಶಾವರದ ಗೋರ್ ಕುತ್ತಾರಿ ಪ್ರದೇಶದಲ್ಲಿರುವ ಹಿಂದೂ ದೇವಾಲಯದ ಬಾಗಿಲನ್ನು ಮತ್ತೆ ತೆರೆಯಲಾಗಿದ್ದು, ಹಿಂದೂಗಳು ಸಂಭ್ರಮದಿಂದ ದೇವಾಲಯದಲ್ಲಿ ದೀಪಾವಳಿ ಆಚರಿಸಿದರು ಎಂದು ಡಾನ್‌ ಪತ್ರಿಕೆ ಸೋಮವಾರ ವರದಿ ಮಾಡಿದೆ.

ದೇವಾಲಯದ ಬಾಗಿಲು ಮತ್ತೆ ತೆರೆದಿರುವುದಕ್ಕೆ ದೇವಾಲಯದ ಅರ್ಚಕರ ಮೊಮ್ಮಗಳಾಗಿರುವ ಕಮಲಾರಾಣಿ ಸಂತಸ ವ್ಯಕ್ತಪಡಿಸಿದ್ದಾರೆ.

ದೇವಾಲಯದ ಬಾಗಿಲನ್ನು ಮತ್ತೆ ತೆರೆಯಲು ನಮ್ಮ ತಾಯಿ ನಡೆಸಿದ ಕಾನೂನು ಹೋರಾಟಕ್ಕೆ ಜಯ ದೊರೆತಿರುವುದಕ್ಕೆ ತುಂಬಾ ಸಂತಸವಾಗಿದೆ ಎಂದು ಕಮಲಾ ರಾಣಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

ದೇವಾಲಯದಲ್ಲಿ ಪೂಜೆ ಮಾಡಲು ಅನುಮತಿ ನೀಡುವಂತೆ ಕೋರಿ ಫೂಲ್‌ವತಿ ಅವರು ಪೇಶಾವರ ಹೈಕೋರ್ಟ್‌‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಹಿಂದೂಗಳ ಹೋರಾಟದ ಫಲವಾಗಿ ದೇವಾಲಯದ ಬಾಗಿಲನ್ನು ಮತ್ತೆ ತೆರೆಯಲಾಗಿದೆ ಎಂದು ಕಮಲಾ ರಾಣಿ ತಿಳಿಸಿದ್ದಾರೆ.

ದೇವಾಲಯದ ಬಾಗಿಲು ಮತ್ತೆ ತೆರೆದಿರುವುದರಿಂದ ಹಿಂದೂಗಳಿಗೆ ಆಗಿರುವ ಸಂತಸವನ್ನು ವರ್ಣಿಸಲು ಸಾಧ್ಯವಿಲ್ಲ ಎಂದು ದೀಪಾವಳಿಯಂದು ದೇವಾಲಯದಲ್ಲಿ ನಡೆದ ಸಮಾರಂಭದಲ್ಲಿ ಕಮಲಾರಾಣಿ ತಿಳಿಸಿದ್ದಾರೆ.

ಪೂಜೆಗಾಗಿ ಮಾತ್ರ ದೇವಾಲಯದ ಬಾಗಿಲು ತೆರೆಯಬೇಕು. ಪುರಾತತ್ವ ಇಲಾಖೆ ಈ ದೇವಾಲಯವನ್ನು ನಿಯಂತ್ರಿಸಬೇಕು ಎಂದು ಪೇಶಾವರ ಹೈಕೋರ್ಟ್‌ ಆದೇಶ ನೀಡಿದೆ.

ವೆಬ್ದುನಿಯಾವನ್ನು ಓದಿ