ಪಾಪ್‌ ತಾರೆಯ ಬೆತ್ತಲೆ ಚಿತ್ರಗಳು ಅಂತರ್ಜಾಲದಲ್ಲಿ ಅನಾವರಣ

ಬುಧವಾರ, 2 ಏಪ್ರಿಲ್ 2014 (15:05 IST)
ಖ್ಯಾತ ಪಾಪ್‌ ತಾರೆ. ಯುವಕರ ಮನಸ್ಸನ್ನು ಹುಚ್ಚೆದ್ದು ಕುಣಿಸುವ ಚೆಲುವೆ. ಒಂದಾನೊಂದು ಕಾಲದ ಪಡ್ಡೆಗಳ ಕನಸು ಕದ್ದು, ನಿದ್ದೆ ಕೆಡಿಸುತ್ತಿದ್ದ ಸ್ವಪ್ನ ಸುಂದರಿ ಮಡೋನ್ನಾಳ ಬೆತ್ತಲೆ ಚಿತ್ರಗಳು ಇದೀಗ ಇಂಟರ್‌ನೆಟ್‌ನಲ್ಲಿ ಹರಿದಾಡಲಿವೆ.

1977 ರಲ್ಲಿ ಮಡೋನ್ನಾ ತನ್ನ ಅಂದವನ್ನೆಲ್ಲಾ ಸಂಪೂರ್ಣವಾಗಿ ಫೋಟೋ ಕ್ಯಾಮೆರಾ ಮುಂದೆ ಬಿಚ್ಚಿಟ್ಟಿದ್ದಳು. ಇದೀಗ ಆ ಎಲ್ಲಾ ಬೆತ್ತಲೆ ಫೋಟೋಗಳು ನವೆಂಬರ್‌ 9 ರಿಂದ ಅಂತರ್ಜಾಲದಲ್ಲಿ ಅಪ್ಪಳಿಸಲಿವೆ. ಈ ಹಿಂದೆ 1987 ರಲ್ಲಿ ಈ ಎಲ್ಲಾ ಫೋಟೋಗಳನ್ನು ವಿದೇಶೀ ನಿಯತಕಾಲಿಕೆಯಲ್ಲಿ ಮುದ್ರಿತಗೊಂಡಿದ್ದವು. ಆದ್ರೆ ಇದೀಗ ಆ ಎಲ್ಲಾ ಫೋಟೋಗಳು ಅಂತರ್ಜಾಲದಲ್ಲಿ ಧುಮ್ಮಿಕ್ಕಲಿವೆ.

ಈ ಖ್ಯಾತ ಪಾಪ್ ತಾರೆ ಮಡೊನ್ನಾ ಮಾಡೆಲಿಂಗ್ ಫೋಟೋಶೂಟ್‌ಗೆ ಪ್ರತಿ ಗಂಟೆಗೆ 10 ಡಾಲರ್‌ ಹಣವನ್ನು ಸಂಪಾದನೆ ಮಾಡ್ತಿದ್ರು. ಆಗಿನ ಕಾಲದಲ್ಲಿಯೇ ಈಕೆಯ ಮಾಡೆಲಿಂಗ್ ಫೋಟೋಗೆ ಡಾಲರ್‌ಗಟ್ಟಲೆ ಹಣಕ್ಕೆ ಮಾರಾಟವಾಗಿದ್ದವು. ಇದೀಗ ಆ ಎಲ್ಲಾ ಫೋಟೋಗಳು ಅಂತರ್ಜಾಲದಲ್ಲಿ ಹರಿದಾಡಲಿವೆ. ಬರಗೆಟ್ಟ ರಸಿಕ ಶೀಖಾಮಣಿಗಳಿಗೆ ಇದೊಂದು ದೊಡ್ಡ ಹಬ್ಬವಾಗಿ ಪರಿಣಮಿಸಲಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.

ವೆಬ್ದುನಿಯಾವನ್ನು ಓದಿ