ಪುತ್ರನಿಗೆ ಉತ್ತರಾಧಿಕಾರ ಹಸ್ತಾಂತರಕ್ಕೆ ರಾಣಿ ಎಲಿಜಬೆತ್ ಸಿದ್ಧತೆ

ಬುಧವಾರ, 22 ಜನವರಿ 2014 (15:26 IST)
ಬ್ರಿಟನ್‌ನ 2ನೇ ಎಲಿಜಬೆತ್ ರಾಣಿ ಕ್ರಮೇಣ ತಮ್ಮ ಪುತ್ರ ರಾಜಕುಮಾರ್ ಚಾರ್ಲ್ಸ್ ಅವರಿಗೆ ಅಧಿಕಾರ ಮತ್ತು ಸಿಂಹಾಸನದ ಉತ್ತರಾಧಿಕಾರವನ್ನು ವಹಿಸಿಕೊಡಲಿದ್ದಾರೆ. ಈ ವರ್ಷದಿಂದ ಇವರಿಬ್ಬರು ಪರಿಣಾಮಕಾರಿ ಉದ್ಯೋಗ ಹಂಚಿಕೆ ಯೋಜನೆ ರೂಪಿಸುವುದು ಖಚಿತವಾಗಿದೆ. 87 ವರ್ಷ ವಯಸ್ಸಿನ ರಾಣಿ ಮತ್ತು ವೇಲ್ಸ್ ರಾಜಕುಮಾರನ ಪ್ರೆಸ್ ಕಚೇರಿಗಳನ್ನು ವಿಲೀನಗೊಳಿಸಲಾಗಿದೆ. ಇದನ್ನು ರಾಜಕುಮಾರ ಚಾರ್ಲ್ಸ್‌ಗೆ ಅಧಿಕಾರ ಹಸ್ತಾಂತರದ ಸಿದ್ದತೆಯ ಲಕ್ಷಣವೆಂದು ಭಾವಿಸಲಾಗಿದೆ.

PR
PR
65 ವರ್ಷದ ಪ್ರಿನ್ಸ್ ಆಫ್ ವೇಲ್ಸ್ ಈ ಬೇಸಿಗೆಯಲ್ಲಿ ನಾರ್ಮಾಂಡಿ ಬೀಚ್‌ಗೆ ಜತೆಗೂಡಿ ಡಿ-ಡೇ ಸ್ಮರಣೆಯ 70ನೇ ವಾರ್ಷಿಕದಲ್ಲಿ ಭಾಗವಹಿಸಲಿದ್ದಾರೆ.ಡಿ-ಡೇ ಸ್ಮರಣೆಯನ್ನು ಯೋಜಿಸಿರುವ ಫ್ರೆಂಚ್ ಸರ್ಕಾರದ ಸಲಹೆಗಾರ ಇದು ರಾಣಿಯ ಕೊನೆಯ ಅಧಿಕೃತ ವಿದೇಶಿ ಭೇಟಿಯಾಗಬಹುದು ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ