ಪ್ಯಾರಿಸ್‌ನಲ್ಲಿ ಮಾಲಿನ್ಯ: ಸಾರಿಗೆಗಳಲ್ಲಿ ಉಚಿತ ಪ್ರಯಾಣ ಘೋಷಣೆ

ಶುಕ್ರವಾರ, 14 ಮಾರ್ಚ್ 2014 (19:25 IST)
PR
PR
ಪ್ಯಾರಿಸ್ ಪ್ರದೇಶದಲ್ಲಿ ಎಲ್ಲ ಸಾರಿಗೆವಾಹನಗಳಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ಭಾನುವಾರ ಸಂಜೆವರೆಗೆ ಉಚಿತ ಪ್ರಯಾಣ ಮಾಡಬಹುದು. ವಾಹನಸವಾರರು ತಮ್ಮ ಕಾರುಗಳನ್ನು ಮನೆಯಲ್ಲೇ ಬಿಟ್ಟು ರಸ್ತೆಸಾರಿಗೆಯಲ್ಲಿ ಪ್ರಯಾಣ ಮಾಡಲಿ ಎನ್ನುವುದು ಇದರ ಉದ್ದೇಶ. ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ವಾಯು ಮಾಲಿನ್ಯದ ಮಟ್ಟ ಕಳೆದ ಮೂರು ದಿನಗಳಿಂದ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಇದರಿಂದ ನಿವಾಸಿಗಳಿಗೆ ಉಂಟಾಗುವ ಅಪಾಯಗಳನ್ನು ಗಮನಿಸಿ, ಮಾಲಿನ್ಯ ಗರಿಷ್ಠ ಮಟ್ಟಕ್ಕೇರುವ ಸಂದರ್ಭದಲ್ಲಿ ಸರ್ಕಾರಿ ಸಾರಿಗೆ ಸೇರಿದಂತೆ ಎಲ್ಲ ಪ್ರಾದೇಶಿಕ ಸಾರ್ವಜನಿಕ ಸಾರಿಗೆಗಳಲ್ಲಿ ಉಚಿತ ಪ್ರಯಾಣವನ್ನು ಪ್ರಕಟಿಸಿರುವುದಾಗಿ ಸಾರಿಗೆ ಮುಖ್ಯಸ್ಥ ಜೀನ್ ಪಾಲ್ ಹುಚನ್ ಹೇಳಿದ್ದಾರೆ.

2011ರಲ್ಲಿ ಸೂಕ್ಷ್ಮ ಕಣಗಳ ಮಾಲೀನ್ಯದ ಸಾಂದ್ರತೆ ಗಾಳಿಯ ಪ್ರತಿ ಎಂ3ಕ್ಕೆ 80 ಮೈಕ್ರೋಗ್ರಾಂ ತಲುಪಿದ ಸಂದರ್ಭದಲ್ಲಿ ಎಲ್ಲ ಸಾರ್ವಜನಿಕ ಸಾರಿಗೆಯಲ್ಲಿ ಉಚಿತ ಪ್ರಯಾಣ ಘೋಷಿಸಲು ನಿರ್ಧರಿಸಲಾಗಿತ್ತು. ಗುರುವಾರ ಪ್ಯಾರಿಸ್‌ನಲ್ಲಿ ಸೂಕ್ಷ್ಮ ಕಣಗಳ ಮಾಲೀನ್ಯ ಪ್ರತಿ ಎಂ3ಗೆ 100 ಮೈಕ್ರೋಗ್ರಾಂ ಮುಟ್ಟಿದ ಹಿನ್ನೆಲೆಯಲ್ಲಿ ಉಚಿತ ಸಾರಿಗೆ ಪ್ರಯಾಣ ಘೋಷಿಸಲಾಯಿತು.

ವೆಬ್ದುನಿಯಾವನ್ನು ಓದಿ